ಬೆಂಗಳೂರು: ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ. ಕೊವಿಡ್‌ನಿಂದ ಮೃತರ ಕುಟುಂಬಕ್ಕೆ ಹಣ ಕೊಟ್ಟಿದ್ದೇವೆ ಎಂದ. ಎಲ್ಲಪ್ಪಾ ದಾಖಲೆ ತೋರಿಸಿ ಅಂದ್ರೆ ತಬ್ಬಿಬ್ಬು ಆಗಿಬಿಟ್ಟ. ಯಾರಿಗೂ ಹಣ ಕೊಟ್ಟಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಸತ್ಯ ಹೇಳಿದ್ರು. ಸುಳ್ಳು ಹೇಳುವುದೇ ಬಿಜೆಪಿಯ ಕೆಲಸ. ಹಿಟ್ಲರ್ ಸರ್ಕಾರ ಇದು, ಹಿಟ್ಲರ್ ರೀತಿ ಸುಳ್ಳು ಹೇಳ್ತಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಆರ್ಎಸ್ಎಸ್ನವ್ರು ಇದೀಗ ಚಡ್ಡಿ ಬಿಟ್ಟು ಪ್ಯಾಂಟ್ ಹಾಕಿದ್ದಾರೆ. ಆರ್ಎಸ್ಎಸ್ನಲ್ಲಿ ಯಾರು ದೇಶ ಭಕ್ತರು ಇಲ್ಲ. ಆರ್ಎಸ್ಎಸ್ನಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿ, ಆರ್ಎಸ್ಎಸ್ನವ್ರು ದೇಶಕ್ಕಾಗಿ ಒಬ್ಬರು ಸತ್ತಿಲ್ಲ. ಸುಮ್ಮನೆ ಭಾರತ್ ಮಾತಾಕೀ ಜೈ ಅಂತ ಹೇಳ್ತಾರೆ. ಬಿಜೆಪಿ ತಮ್ಮ ಕಚೇರಿಯಲ್ಲಿ ಮೊದಲು ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೊ ಸಹ ಹಾಕ್ತಿರಲಿಲ್ಲ. ಈಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಹಾಕ್ತಾರೆ. ಬಿಜೆಪಿ ಅವ್ರು ಬಡವರ ವಿರೋಧಿಗಳು ಎಂದು ಸಿದ್ದರಾಮಯ್ಯ ಬಿಜೆಪಿಯನ್ನು ಟೀಕಿಸಿದ್ದಾರೆ.