ಪುತ್ತೂರು: ನಗರ ಸಭಾ ವ್ಯಾಪ್ತಿಯ ಬನ್ನೂರು ವಾರ್ಡ್ ನಂಬರ್ 05ರ MR ಗಾರ್ಬಲ್ ರಸ್ತೆ ಹಾಗೂ ಲಕ್ಕಿ ಸ್ಟಾರ್ ಕಂಪೌಂಡ್ ಬಳಿಯ ಇಂಟರ್ ಲಾಕ್ ರಸ್ತೆಯ ಉದ್ಘಾಟನಾ ಕಾರ್ಯವು ಸಪ್ಟೆಂಬರ್ 26 ರಂದು ನಡೆಯಿತು. ಎಂ.ಆರ್ ರಸ್ತೆಯನ್ನು ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್ ಉದ್ಘಾಟಿಸಿದರು.ಲಕ್ಕಿ ಸ್ಟಾರ್ ರಸ್ತೆಯನ್ನು ಸ್ಥಳೀಯ ವಾರ್ಡಿನ ನಗರ ಸಭಾ ಸದಸ್ಯೆ ಕೆ. ಫಾತಿಮತ್ ಝೋರಾ ಉದ್ಘಾಟಿಸಿದರು.
ಎಂ. ಆರ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ನಗರ ಸಭಾ ಚುನಾವಣೆಯಲ್ಲಿ ನಾವು ಗೆದ್ದು 3 ವರ್ಷಗಳಾದರೂ ಕಾರಣಾಂತರಗಳಿಂದ ನಾವು ಕಳೆದ 1ವರ್ಷ ದಿಂದ ಅಧಿಕಾರ ನಡೆಸುತ್ತಾ ಬಂದಿದ್ದೇವೆ. ಪಕ್ಷ ಯಾವುದೇ ಇರಲಿ ನಮಗೆ ಪಕ್ಷ ಮುಖ್ಯ ಅಲ್ಲ ನಮಗೆ ಅಭಿವೃದ್ಧಿ ಮುಖ್ಯ.ಪಕ್ಷ ರಾಜಕೀಯ ಚುನಾವಣೆ ಸಮಯದಲ್ಲಿ ಮಾತ್ರ. ಸ್ಥಳೀಯ ವಾರ್ಡ್ ಸದಸ್ಯೆ ಕೆ. ಫಾತಿಮತ್ ಝೋರಾ ರವರು ನಗರ ಸಭೆಯ ಪ್ರತಿಯೊಂದು ಸಭೆಗಳಿಗೂ ತಪ್ಪದೆ ಹಾಜರಾಗಿ ತಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದನ್ನು ನಗರ ಸಭಾ ಅಧ್ಯಕ್ಷರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಕ್ಷೇತ್ರ ಸಮಿತಿ ಸದಸ್ಯರಾದ ಕೆ.ಎk ಸಿದ್ದೀಕ್,PBK ಮೊಹಮ್ಮದ್, ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಕಾರ್ಯದರ್ಶಿ ಜುನೈದ್ ಸಾಲ್ಮರ, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.