ಪುತ್ತೂರು, ಸೆ.26: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಎಂ.ಎನ್.ಜಿ ಫೌಂಡೇಶನ್ (ರಿ) ಮಂಗಳೂರು ಮತ್ತು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ ಜಂಟಿ ಆಶ್ರಯದಲ್ಲಿ ಅವಿನಾಶ್ ಆಳ್ವ ಸ್ಮರಣಾರ್ಥ ರಕ್ತದಾನ ಶಿಬಿರ ಕಾರ್ಯಕ್ರಮವು ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹೇಮನಾಥ್ ಶೆಟ್ಟಿ ಕಾವು ನೆರವೇರಿಸಿ ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿದರು.ಸಭಾಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನಸ್ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಸುತೇಶ್ ಶುಭಹಾರೈಸಿದರು.
ಯಶಸ್ವಿ ರಕ್ತದಾನ ಶಿಬಿರದಲ್ಲಿ ಒಟ್ಟು 33 ಮಂದಿ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಜೀವದಾನಿಗಳಾದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಸದಸ್ಯರಾದ ಗೋವರ್ದನ್ ಶೆಟ್ಟಿ, ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅನಿತಾ ಹೇಮನಾಥ್ ಶೆಟ್ಟಿ, ಲಿಯೊ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷರಾದ ಲಿಯೊ ರಂಜಿತಾ ಶೆಟ್ಟಿ, MNG ಫೌಂಡೇಶನ್ ಕಾರ್ಯನಿರ್ವಾಹಕರಾದ ಇಸಾಕ್ ತುಂಬೆ, ಯುವ ಕಾಂಗ್ರೆಸ್ ದ.ಕ. ಉಪಾಧ್ಯಕ್ಷರಾದ ಗಿರೀಶ್ ಆಳ್ವ, ಪ್ರಸನ್ನ ಶೆಟ್ಟಿ, S.Y.F. ಪುತ್ತೂರು ಅಧ್ಯಕ್ಷರಾದ ಮೋನು ಬಪ್ಪಳಿಗೆ, ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಪಾಣಾಜೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಇಮ್ತಿಯಾಝ್ ಪಾರ್ಲೆ, ಬಶೀರ್ ಪರ್ಲಡ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ಅಲಿ ಪರ್ಲಡ್ಕ, ರಿಯಾಝ್ ಕಣ್ಣೂರು, ಸಾಬಿತ್ ಕುಂಬ್ರ, ಇಫಾಝ್ ಬನ್ನೂರು, ರಝ್ವೀನ್ ಗುರುವಾಯನಕೆರೆ, ಆಶಿಕ್ ಫೋಕಸ್, ಸಮೀರ್ ಉಳಾಯಿಬೆಟ್ಟು ಮತ್ತು MNG ಫೌಂಢೇಷನ್ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.
MNG ಫೌಂಡೇಶನ್ ಕಾರ್ಯನಿರ್ವಾಹಕರಾದ ನಕಾಶ್ ಬಾಂಬಿಲ ಸ್ವಾಗತ ಭಾಷಣ ಮಾಡಿದರು.ಕಾರ್ಯಕ್ರಮವನ್ನು ಸಿದ್ದೀಕ್ ಸುಲ್ತಾನ್ ನಿರೂಪಿಸಿದರು.