ದೆಹಲಿ: ಅಮೆರಿಕದಿಂದ ಹಿಂದಿರುಗಿ 24 ಗಂಟೆಗಳಿಗಿಂತಲೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 8:45 ರ ಸುಮಾರಿಗೆ ಹೊಸ ಸಂಸತ್ ಕಟ್ಟಡದ ನಿರ್ಮಾಣ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಮೋದಿ ಪ್ರಸ್ತಾವಿತ ಸೆಂಟ್ರಲ್ ವಿಸ್ಟಾ ಯೋಜನೆಯ ಸ್ಥಳದಲ್ಲಿ ಸುಮಾರು ಒಂದು ಗಂಟೆ ಕಳೆದರು ಮತ್ತು ಹೊಸ ಪಾರ್ಲಿಮೆಂಟ್ ಕಟ್ಟಡದ ನಿರ್ಮಾಣ ಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು. ಅವರ ಭೇಟಿಯ ಬಗ್ಗೆ ಯಾವುದೇ ಪೂರ್ವ ಸೂಚನೆ ಅಥವಾ ಭದ್ರತಾ ವಿವರ ಇರಲಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಡಿಸೆಂಬರ್ 10, 2020 ರಂದು ದೆಹಲಿಯ ಹೊಸ ಸಂಸತ್ ಭವನಕ್ಕೆ ಮೋದಿ ಶಂಕುಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕ್ಯಾಬಿನೆಟ್ ಮಂತ್ರಿಗಳು ಮತ್ತು ವಿವಿಧ ದೇಶಗಳ ರಾಯಭಾರಿಗಳು ಭಾಗವಹಿಸಿದ್ದರು.
64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಹೊಸ ಕಟ್ಟಡವು 2022ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಯೋಜನೆಯ ಪ್ರಕಾರ ಡಿಸೆಂಬರ್ 2022ರ ಅಧಿವೇಶನವು ಹೊಸ ಸಂಸತ್ನಲ್ಲಿ ಅಡಿಯಲ್ಲಿ ನಡೆಯಲಿದೆ. ಸಂಸತ್ ಭವನ ನಿರ್ಮಾಣದ ಅಂದಾಜು ವೆಚ್ಚ 971 ಕೋಟಿ ರೂ. ಇದು ನಿರ್ಮಾಣದಿಂದ ಹಿಡಿದು ಸುರಕ್ಷತಾ ಉಪಕರಣಗಳು ಮತ್ತು ಇತರ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
PM Narendra Modi went to the construction site of the new parliament building in New Delhi at around 8.45 pm today. He spent almost an hour at the site & did a first-hand inspection of the construction status of the new parliament building. pic.twitter.com/kYIwbgXwxq
'; } else { echo "Sorry! You are Blocked from seeing the Ads"; } ?>