ಪುತ್ತೂರು, ಸೆ.27: ಪುತ್ತೂರಿನ ದರ್ಬೆ ಸರ್ಕಲ್ ಬಳಿ ಆಕ್ಟೀವಾ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು, ಬೈಕ್’ನಲ್ಲಿದ್ದ ತಂದೆ ಮತ್ತು ಮಗನಿಗೆ ಗಾಯವಾಗಿದೆ.
ಆಟೋ ರಿಕ್ಷಾ ಮತ್ತು ಆಕ್ಟೀವ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಪಾಣೆಮಂಗಳೂರು ನಿವಾಸಿಯ ಕೈ ಮುರಿತಕ್ಕೊಳಗಾಗಿದೆ. ಗಾಯಾಲುವನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.