dtvkannada

ಕಲ್ಮಿಂಜ: ವರ್ಕಾಡಿ /ನರಿಂಗಾನ ಸಮೀಪದ ಕಲ್ಮಿಂಜದಲ್ಲಿ, ಬದ್ರಿಯಾ ಜಮಾ ಮಸೀದಿ, SYS ಹಾಗೂ SSF ನ ಜಂಟಿ ಆಶ್ರಯದಲ್ಲಿ ಬೇಕಲ್ ಉಸ್ತಾದ್ ರವರ ಪ್ರಥಮ ಆಂಡ್ ನೇರ್ಚೆ ಸಮಾರಂಭವು ಖಾಲಿದ್ ಮದನಿ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಕುಂಬೋಳ್ ತಂಙಳ್ ಎಂದೇ ಪ್ರಸಿದ್ಧರಾದ ಕೆ ಎಸ್ ಆಟ್ಟಕ್ಕೋಯ ತಂಙಳ್ ರವರು, ವಿರಾಮದ ವೇಳೆಯಲ್ಲಿಯೂ ಸಿಗುವ ಅಲ್ಪ ಸಮಯಗಳಲ್ಲಿಯೂ ಕಲಿಯಬೇಕು, ಜ್ಞಾನಾರ್ಜನೆಗಾಗಿ ಮೀಸಲಿಡುವ ಸಮಯವು ವ್ಯರ್ಥವಾಗದು, ಎಂದು ತಾಜುಲ್ ಫುಖಹಾಅ್ ಸದಾ ಸಮಯ ಹೇಳುತ್ತಿದ್ದ ಮಾತಾಗಿತ್ತೆಂದು ಹೇಳಿದರು.

ಬೇಕಲ್ ಉಸ್ತಾದ್ ರವರು ಹುಟ್ಟಿದ ಮಣ್ಣಿನಲ್ಲಿ ವಾಸಿಸುತ್ತಿರುವ ನೀವು ಧನ್ಯರು. ಒಂದು ವೇಳೆ ಶೈಖುನಾ ಇದೇ ಊರಿನಲ್ಲಿ ದರ್ಸ್ ನಡೆಸಲು ಪ್ರಾರಂಭಿಸಿರುತ್ತಿದ್ದರೆ ಇಂದು, ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಎಂಬ ಹೆಸರಿನ ಬದಲಿಗೆ ಕಲ್ಮಿಂಜ ಇಬ್ರಾಹಿಂ ಮುಸ್ಲಿಯಾರ್ ಎಂದು ಹೇಳಬಹುದಾಗಿತ್ತು.

ಸುಮಾರು 50 ವರ್ಷಗಳ ಹಿಂದೆ, ಕಿನ್ಯದಲ್ಲಿ ಶೈಖುನಾರವರು ದರ್ಸ್ ಮುಗಿಸಿ, ಕುಂಬಳೆ ಸಮೀಪದ ಕುಂಬೋಳ್ ನಲ್ಲಿ, ತಾಜುಶ್ಶರೀಅ ಉಸ್ತಾದ್ ರವರ ದರ್ಸ್ ನಲ್ಲಿ ಕಲಿಯುತ್ತಿದ್ದಾಗ ಊಟ ಮಾಡುತ್ತಿದ್ದುದು ನಮ್ಮ ಮನೆಯಲಾಗಿತ್ತು, ಅಂದಿನ ದರ್ಸ್ ಗೂ ಇಂದಿನ ದರ್ಸ್ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿನ ಕಾಲದಲ್ಲಿ ಮಸೀದಿಯ ಒಂದು ಮೂಲೆಯಲ್ಲಿ ಚಿಮಿನಿ ದೀಪವನ್ನು ಹಚ್ಚಿ, ಅದರ ಬೆಳಕಿನಲ್ಲಾಗಿತ್ತು ಕಲಿಕೆ. ಊಟ ಮಾಡಲು ಬರುತ್ತಿದ್ದ ಶೈಖುನಾ ರವರಲ್ಲಿ ನಮ್ಮ ತಂದೆಯವರು ಹೇಳುತ್ತಿದ್ದ ಮಾತಾಗಿತ್ತು, “ಚೆನ್ನಾಗಿ ಊಟ ಮಾಡಬೇಕು, ಚೆನ್ನಾಗಿ ಕಲಿಯಬೇಕು, ಚೆನ್ನಾಗಿ ವಅಲ್ (ಪ್ರಭಾಷಣ) ಮಾಡಬೇಕು” ಎಂಬುದಾಗಿತ್ತು. ಅದರ ಫಲವೇ ಶೈಖುನಾ ಈ ಮಟ್ಟಕ್ಕೆ ತಲುಪಲು ಕಾರಣವೆಂದು, ಮರಣದ ಕೊನೆಯ ವೇಳೆಯವರೆಗೂ ಅವರು ಹೇಳುತ್ತಿದ್ದರು.

ಶೈಖುನಾರವರ ವಫಾತಿನ ಮುಂಚಿನ ದಿವಸ ನನಗೆ ಅವರನ್ನು ಕಾಣಬೇಕೆಂದು ಆಸೆಯಿತ್ತು, ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ನನ್ನ ಮಗನನ್ನು ಕಳುಹಿಸಿ ಆರೋಗ್ಯ ವಿಚಾರಿಸಿದ್ದೆ, ಅದೂ ಅಲ್ಲದೆ ನನ್ನ ತಮ್ಮನಾದ ಸಯ್ಯಿದ್ ಡಾಕ್ಟರ್ ಸಿರಾಜುದ್ದೀನ್ ರವರಲ್ಲಿ ಯಾವಾಗಲೂ ಶೈಖುನಾ ರವರ ಬಗ್ಗೆ ವಿಚಾರಿಸುತ್ತಿದ್ದೆ ಎಂದು ಹೇಳಿದರು. ಅರ್ಧದಶಕಗಳ ತಮ್ಮಿಬ್ಬರ ನಡುವಿನ ಭಾಂಧವ್ಯವನ್ನು ಸುಮಾರು ಒಂದೂವರೆ ಗಂಟೆಗಳಲ್ಲಿ ಸವಿಸ್ತಾರವಗಿ ವಿವರಿಸಿದರು.

ಕಾರ್ಯಕ್ರಮದ ಉಧ್ಘಾಟನೆಯನ್ನು ವಹಿಸಿದ್ದ ಸ್ಥಳೀಯ ಖತೀಬರಾದ ಅಬ್ದುಲ್ ರಹ್ಮಾನ್ ಸಖಾಫಿ ಚಿಪ್ಪಾರ್ ಮಾತನಾಡಿ, ಸಯ್ಯಿದ್ (ಅಹ್ಲ್ ಬೈತಿನ) ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು, SYS, SSF ನಾಯಕರು ಮತ್ತು ಕಾರ್ಯಕರ್ತರು ಹಾಗೂ ಊರಿನ ಹಿರಿಯ ಕಿರಿಯರೆಲ್ಲರೂ ಭಾಗವಹಿಸಿದ್ದರು.
ಜಮಾಅತ್ ಹಾಗೂ ಎಸ್’ವೈಎಸ್, ಎಸ್ಸೆಸ್ಸೆಫ್ ವತಿಯಿಂದ ಕುಂಬೋಳ್ ತಂಙಳ್ ರವರಿಗೆ ಶಾಲು ಹೊದಿಸಿ ಸನ್ಮಾನ ನೀಡಲಾಯಿತು. ಮಸೀದಿ ಅಧೀನದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಶೌಚಾಲಯದ ಕಾಮಗಾರಿಗೆ ಎಸ್ಸೆಸ್ಸೆಫ್ ವತಿಯಿಂದ 20,000 ರೂಪಾಯಿ ಧನ ಸಹಾಯವನ್ನು ತಂಙಳ್ ಮುಖಾಂತರ ನೀಡಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!