ವಿಟ್ಲ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿಯ ವತಿಯಿಂದ ಧ್ವಜ ದಿನದ ಭಾಗವಾಗಿ ಸಂಘಟನೆಗೆ ನಾಯಕತ್ವ ನೀಡಿದ ಪೂರ್ವಿಕ ಹಿರಿಯ ನಾಯಕರೊಂದಿಗೆ ಚರ್ಚಾ ಕೂಟ ವಿಟ್ಲದ ಅಶ್’ಅರಿಯ್ಯಾ ಟೌನ್ ಮಸ್ಜಿದ್ ಇದರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಡಿವಿಷನ್ ಅಧ್ಯಕ್ಷರಾದ ಅಬೂಬಕ್ಕರ್ ಹಿಮಮಿ ಸಖಾಫಿ ಯವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮವನ್ನು ವಿಟ್ಲ ಸುನ್ನೀ ಕೋಆರ್ಡಿನೇಶನ್ ಸಮಿತಿಯ ಕೋಶಾಧಿಕಾರಿ ಜಿ.ಎಂ ಅಬೂಬಕ್ಕರ್ ಸುನ್ನೀ ಫೈಝಿ ದುಆ ಮೂಲಕ ಚಾಲನೆ ನೀಡಿ ತಮ್ಮ ಸಂಘಟನಾ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್.ವೈ.ಎಸ್ ಜಿಲ್ಲಾ ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಮಂಗಲಪದವು, ಡಿವಿಷನ್ ಸಮಿತಿಯ ರಚನೆಯ ಬಗ್ಗೆ ವಿವರಿಸಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನಾಯಕರಾದ ಇಬ್ರಾಹಿಂ ಹಾಜಿ ಬ್ರೈಟ್ ಹಾಗೂ ಕೆಸಿಎಫ್ ಸೌದಿ ಅರೇಬಿಯಾ ನಾಯಕರಾದ ಸಿದ್ದೀಕ್ ಸಖಾಫಿ ಪೆರುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂಕೆಎಂ ಹನೀಫ್ ಕಾಮಿಲ್ ಸಖಾಫಿ, ಇಬ್ರಾಹಿಂ ಮುಸ್ಲಿಯಾರ್, ಸಲೀಂ ಹಾಜಿ ಬೈರಿಕಟ್ಟೆ, ಶರೀಫ್ ಮುಸ್ಲಿಯಾರ್ ಮೇಗಿನಪೇಟೆ, ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು, ಕೆಎಂ ಅಶ್ರಫ್ ಸಖಾಫಿ ಕನ್ಯಾನ, ರಹೀಂ ಸಖಾಫಿ ವಿಟ್ಲ ಸೇರಿದಂತೆ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪೂರ್ವಿಕ ಹಿರಿಯ ನಾಯಕರಾದ ಕಾದರ್ ಸಅದಿ ಕನ್ಯಾನ, ಜಲೀಲ್ ಸಖಾಫಿ, ಎಂಐಎಂ ಅಶ್ರಫ್ ಸಖಾಫಿ ಮಂಡ್ಯೂರು, ಹಮೀದ್ ಉಕ್ಕುಡ, ಮುಹಮ್ಮದ್ ಅಲಿ ಮೂಡಂಬೈಲು, ಮೂಸ ಕೆಲೀಂ ಬೈರಿಕಟ್ಟೆ, ಸಿಎಚ್ ಅಬ್ದುಲ್ ಕಾದರ್ ಕೊಡುಂಗಾಯಿ ಸೇರಿದಂತೆ ಡಿವಿಷನ್ ನಾಯಕರಾದ ಜಂಶಾದ್ ಕಂಬಳಬೆಟ್ಟು, ಕಲಂದರ್ ಕಾನತ್ತಡ್ಕ, ಹಾರಿಸ್ ಹಿಮಮಿ ಪೆರುವಾಯಿ, ಇಬ್ರಾಹಿಂ ಕೋಡಪದವು ಉಪಸ್ಥಿತರಿದ್ದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಹಾಝ್ ಅಳಿಕೆ ಸ್ವಾಗತಿಸಿ, ಅಶ್ಫಾಕ್ ಕೊಡಂಗಾಯಿ ವಂದಿಸಿದರು.