dtvkannada

ಹಾಸನ: ಡೀಸೆಲ್ ಟ್ಯಾಂಕರ್ ಮತ್ತು ಬೊಲೆರೊ ವಾಹನದ ಮಧ್ಯೆ ಡಿಕ್ಕಿಯಾಗಿ ಬೊಲೆರೊ ಗಾಡಿಯಲ್ಲಿದ್ದ ನೂರಾರು ಕೋಳಿಗಳು ಸಾವನ್ನಪ್ಪಿದ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದೆ.

ಡೀಸೆಲ್ ಟ್ಯಾಂಕರ್ ಬೊಲೆರೊ ವಾಹನಕ್ಕೆ ಗುದ್ದಿ ಆ ಬಳಿಕ ರೈಲ್ವೆ ತಡೆಗೋಡೆಗೂ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೊಲೆರೊ ಗಾಡಿ ಕೋಳಿಗಳನ್ನು ತುಂಬಿಕೊಂಡು ಹೋಗುತ್ತಿತ್ತು. ಅಪಘಾತದಲ್ಲಿ ನೂರಾರು ಕೋಳಿಗಳು ಸಾವನ್ನಪ್ಪಿವೆ. ಈ ವೇಳೆ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.

By dtv

Leave a Reply

Your email address will not be published. Required fields are marked *

error: Content is protected !!