';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಚಾಲಕ/ಸವಾರರ ಮೇಲೆ ಮಂಗಳೂರು ಪೊಲೀಸರು ಒಂದು ವಾರದ ವಿಶೇಷ ಕಾರ್ಯಚರಣೆ ಅಭಿಯಾನ ನಡೆಸುತ್ತಿದ್ದು, ಮೊದಲ ದಿನವೇ 2.75 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.ಮೊದಲ ದಿನವಾದ ನಿನ್ನೆ ಟಿಂಟೆಡ್ ಗ್ಲಾಸ್ ಹೊಂದಿದ ಕಾರುಗಳಿಗೆ ದಂಡ ವಿಧಿಸಲಾಗಿದೆ.
ಸ್ಥಳದಲ್ಲಿ ಟಿಂಟೆಡ್ ಕವರ್‌ಗಳನ್ನು ತೆರವು ಮಾಡಲಾಯಿತು. 550 ಕಾರುಗಳ ವಿರುದ್ದ ಪ್ರಕರಣ ದಾಖಲಿಸಿ 2.75 ಲಕ್ಷ ರೂಪಾಯಿ ದಂಡ ವಸೂಲು ಮಾಡಲಾಗಿದೆ.ಒಟ್ಟು 21 ಪೋಲಿಸ್ ತಂಡಗಳು ನಗರದ ರಸ್ತೆಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ಸಡೆಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಹಾಗೂ ಸಂಚಾರ ವಿಭಾಗದ ಎ.ಸಿ.ಪಿ ನಟರಾಜ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು.