ಬೆಳಗಾವಿ: ಚಲಿಸುತ್ತಿದ್ದ ಬಸ್ಸನ್ನು ತಡೆದು ನಿಲ್ಲಿಸಿ ಮಹಿಳೆಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಆಲೂರು ಕೆ.ಎಂ ಗ್ರಾಮದಲ್ಲಿ ನಡೆದಿದೆ.
ಪ್ರವೀಣ್ ಕಾಂಬ್ಳೆ ಎಂಬಾತ ವಂದನಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸಂಕೇಶ್ವರ ಪಟ್ಟಣದಿಂದ ಬಾಡ ಗ್ರಾಮಕ್ಕೆ ತೆರಳುತ್ತಿದ್ದ ಅವರ ಮೇಲೆ ಹಲ್ಲೆ ನಡೆಸಿದ ಪ್ರವೀಣ್ ಕಾಂಬ್ಳೆ ಮಹಿಳೆಗೆ ಪರಿಚಯಸ್ಥ ಎಂಬುದು ತಿಳಿದುಬಂದಿದೆ. ಪ್ರವೀಣ್ ಕಾಂಬ್ಳೆ ಚಿಕ್ಕೋಡಿ ತಾಲೂಕಿನ ಮಾಂಗನೂರಿನ ನಿವಾಸಿ ಎಂಬ ಮಾಹಿತಿ ದೊರೆತಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಸಂಕೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಾಳು ವಂದನಾ ಹಟ್ಟಿಕರ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.