ಗೂನಡ್ಕ, ಅ.2: ಗಾಂಧಿ ಜಯಂತಿಯ 152ನೇ ವರ್ಷಾಚರಣೆಯ ಪ್ರಯುಕ್ತ ಗೂನಡ್ಕದ ರಾಯಲ್ ಫ್ರೆಂಡ್ಸ್ ಸ್ಪೊರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಗಾಂಧಿ ಸ್ಮರಣೆ ಸ್ವಚ್ಛತಾ ಕಾರ್ಯಕ್ರಮ ಮತ್ತು ಸಂಪಾಜೆ ಗ್ರಾಮಕ್ಕೆ ಸ್ವಚ್ಛತಾ ರಾಯಭಾರಿಯೆನಿಸಿರುವ ಅಬ್ದುಲ್ ಖಾದರ್ ಕುಂಬಕೋಡ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷರಾದ ಸಾಜಿದ್ ಐ ಜಿ ವಹಿಸಿಕೊಂಡರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದ ಶವಾದ್ ಗೂನಡ್ಕ ಗಾಂಧಿ ತತ್ವ ಆದರ್ಶವನ್ನು ಯುವಕರಿಗೆ ಸಾರಿದರು.
ಅಬುಶಾಲಿ ಗೂನಡ್ಕ ಮಾತನಾಡಿ ಗಾಂಧೀಜಿಯ ಸ್ವಚ್ಛತಾ ಪರಿಕಲ್ಪನೆ ಮೈಗೂಡಿಸಿಕೊಳ್ಳಲು ಕರೆ ನೀಡಿದರು. ಅಜರುದ್ದೀನ್ ಗೂನಡ್ಕ ಮಾತನಾಡಿ ಗಾಂಧಿ ಜಯಂತಿ ಪ್ರಯುಕ್ತ ಕ್ಲಬ್ ಕೈಗೊಂಡ ಕಾರ್ಯಕ್ರಮವನ್ನು ಶ್ಲಾಘನೆ ಮಾಡಿ ಕ್ಲಬ್ ಅನ್ನು ಬೆಂಬಲಿಸಲು ಮನವಿ ಮಾಡಿಕೊಂಡರು.
ಕೊನೆಯಲ್ಲಿ ಗೂನಡ್ಕದ ಸ್ವಚ್ಛತಾ ಹೆಮ್ಮೆ ಅಬ್ದುಲ್ ಖಾದರ್ ಕುಂಬಕೋಡ್ ರವರನ್ನು ಶಾಲು, ಪೇಟ ಮತ್ತು ಹೂವಿನ ಹಾರ ಹಾಕಿ ಕಿರು ಕಾಣಿಕೆ ನೀಡುದರೊಂದಿಗೆ ಸನ್ಮಾನಿಸಲಾಯಿತು
ಸ್ವಚತಾ ಕಾರ್ಯಕ್ರಮವು ಗೂನಡ್ಕ ಮಸೀದಿ ಬಳಿಯಿಂದ ಆರಂಭಿಸಿ ಗೂನಡ್ಕ ಪೇಟೆಯ ಎರಡು ಭಾಗಗಳಲ್ಲಿ ಸಾಗಿ ಕುಂಬಕೋಡ್ ಮನೆವರೆಗೂ ಸಂಪೂರ್ಣ ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಮನೆಯವರಿಂದ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಸಂಘದ ಉಪಾಧ್ಯಕ್ಷರಾದ ಸಾಜಿದ್ ಐ ಜಿ ರವರನ್ನು ಸನ್ಮಾನಿಸಲಾಯಿತು ಮತ್ತು ಲಘು ತಂಪು ಪಾನೀಯ ಮತ್ತು ಹಣ್ಣುಹಂಪಲು ನೀಡಿ ಸಹಕರಿಸಲಾಯಿತು.
ಈ ಸಂದರ್ಭದಲ್ಲಿ ಗೂನಡ್ಕ ಮನೆತನದ ಜಿ ಜಿ ನವೀನ್ ಗೂನಡ್ಕ ,ಉಪಾಧ್ಯಕ್ಷರಾದ ಹರ್ಷಿತ್,ಹಿರಿಯರಾದ ಸಲಿಂ ದರ್ಕಸ್,ಷರೀಫ್ ಸೆಟ್ಟಿಯಡ್ಕ,ಅಝೀಝ,ರವಿಚಂದ್ರ,ಹೇಮನಾಥ,ಕಾಶಿಮ್,ಬಷೀರ್,ರಹೀಮ್ ಕೊಪ್ಪತಕಜೆ, ಮುಬಾಷಿರ್ , ಮುನವೀರ್,ಸಾದಿಕ್,ಶಮ್ಮಾಸ್ ಮೊದಲಾದವರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಇಜಾಝ್ ಗೂನಡ್ಕ ನಿರೂಪಿಸಿ ಕೊನೆಯಲ್ಲಿ ವಂದಿಸಲಾಯಿತು