ಬೆಳಗಾವಿ : ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಮುಸ್ಲಿಮ್ ಯುವಕನನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ, ಮೃತದೇಹವನ್ನು ರೈಲು ಹಳಿ ಬಳಿ ಎಸೆದಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಖಾನಪುರದಲ್ಲಿ ನಡೆದಿದೆ. 28 ವರ್ಷ ಪ್ರಾಯದ ಅರ್ಬಾಯ್ ಅವರ ಶಿರಚ್ಛೇದಿತ ಮೃತದೇಹ ಖಾನಾಪುರದ ರೈಲು ಹಳಿ ಬಳಿ ಪತ್ತೆಯಾಗಿವೆ. ಕೈ ಕಾಲುಗಳನ್ನು ಕತ್ತರಿಸಿ ಬರ್ಬರವಾಗಿ ಕೊಲೆಗೈಯ್ದಿರುವುದು ಕಂಡುಬಂದಿದೆ.
ಅರ್ಬಾಜ್ ಮುಲ್ಲಾ (28) ಎಂಬಾತ ಯುವತಿಯ ಮನೆಯವರ ವಿರೋಧದ ನಡುವೆ ಪ್ರೀತಿಸುತ್ತಿದ್ದ. ಯುವತಿ ಕುಟುಂಬಸ್ಥರು ಅರ್ಬಾಜ್ಗೆ ಹಲವು ಬಾರಿ ವಾರ್ನ್ ಮಾಡಿದ್ದರಂತೆ. ಆದರೂ ಅರ್ಬಾಜ್ ಮದುವೆಯಾಗಲು ತಯಾರಿ ನಡೆಸಿದ್ದ. ಹೀಗಾಗಿ ಯುವಕ ಕೊಲೆಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಸೆಪ್ಟೆಂಬರ್ 28 ರಂದು ಯುವಕನನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ ಕೈ ಕಾಲುಗಳನ್ನು ಕಟ್ಟಿ ರೈಲು ಬರುವ ಸಮಯ ನೋಡಿಕೊಂಡು ರೈಲು ಹಳಿ ಮೇಲೆ ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಜನರನ್ನು ವಿಚಾರಣೆ ಮಾಡುತ್ತಿದ್ದಾರೆ. ಯುವತಿ ಸೇರಿ ಯುವತಿಯ ಕುಟುಂಬಸ್ಥರನ್ನ ವಶಕ್ಕೆ ಪಡೆದು ಬೆಳಗಾವಿ ರೈಲ್ವೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.