ಬಂಟ್ವಾಳ: ಎಮ್ ಎನ್ ಜಿ ಫೌಂಡೇಶನ್(ರಿ) ಸಂಸ್ಥೆಯ ಕನಸಿನ ಯೋಜನೆಗಳಲ್ಲಿ ಒಂದಾದ ‘ಮನೆ ನಿರ್ಮಿಸಲು ಅಸಾಧ್ಯವಾದ ಕುಟುಂಬಕ್ಕೊಂದು ಮನೆ’ ಯೋಜನೆಯ ಪ್ರಥಮ ಮನೆ “ಎಮ್ ಎನ್ ಜಿ ಮಹಲ್” ನ್ನು ಇಂದು ಬಂಟ್ವಾಳ ಕಾರಾಜೆಯ ಅಸಹಾಯಕ ತಾಯಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬರಾದ ಸೈಯದ್ ಯಹ್ಯಾ ತಂಙಳ್ ಮದನಿ ಅವರು ದುಆ ಆಶೀರ್ವಚನ ನೀಡಿದರು ಹಾಗೂ ಸಂಸ್ಥೆಯ ಪದಾಧಿಕಾರಿ ನಕಾಶ್ ಬಾಂಬಿಲ ಅವರು ಸ್ವಾಗತಿಸಿದರು.ಶೈಖುನಾ ಜಬ್ಬಾರ್ ಉಸ್ತಾದರ ಸುಪುತ್ರರಾದ ಇರ್ಷಾದ್ ದಾರಿಮಿ ಅಲ್-ಜಝರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಕುಟುಂಬಕ್ಕೆ ನೂತನ ಮನೆಯ ಕೀ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯ ಹಿರಿಯ ಸದಸ್ಯರಾದ ಪಿ.ಬಿ.ಕೆ.ಮೊಹಮ್ಮದ್ ಪುತ್ತೂರು ಅವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಸಮಾಜ ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಸಾಧನೆಗೈದ ಮಾದರಿ ಸಮಾಜಸೇವಕರಾದ ಸಲೀಮ್ ಯು.ಕೆ ಉರುವಾಲುಪದವು ಹಾಗೂ ಶಬಾನ ಕಾವಲಕಟ್ಟೆ ಅವರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರಾಜೆ ಪಡ್ಪು ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಯಮಾನಿ, ಉಮ್ಮಗೊರು ಅಗ ಇದರ ಅಧ್ಯಕ್ಷರಾದ ಮುಸ್ತಫಾ ದೆಮ್ಮಲೆ, ಕಾರಾಜೆ ಪಡ್ಪು ಜುಮಾ ಮಸೀದಿ ಅಧ್ಯಕ್ಷರಾದ ಬಿ.ಎ.ಉಸ್ಮಾನ್ ಕಾರಾಜೆ, ಟ್ರಾವೆಲ್ ಮೇಟ್ ಟೂರ್ಸ್ & ಟ್ರಾವೆಲ್ಸ್ ಇದರ ಮಾಲಕರಾದ ಮುಬಾರಕ್ ಕಾರಾಜೆ, ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಶೇಖಬ್ಬ, ಎಮ್ ಎನ್ ಫೌಂಡೇಶನ್ ಸಂಸ್ಥೆಯ ಸಲಹಾ ಸಮಿತಿ ಮುಖ್ಯಸ್ಥರಾದ ಅಲ್ತಾಫ್ ಬೋಳಾರ್, ಎಮ್.ಎಮ್.ಮೋನು ನಂದಾವರ ಹಾಗೂ ಇಸಾಕ್ ತುಂಬೆ ಅವರು ಆಸೀನರಾಗಿದ್ದರು.
ಕಾರ್ಯಕ್ರಮದಲ್ಲಿ ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯ ಸ್ಥಾಪಕರಾದ ಇಲ್ಯಾಸ್ ಮಂಗಳೂರು, ಪದಾಧಿಕಾರಿಗಳಾದ ಮನ್ಸೂರ್ ಬಿ.ಸಿ ರೋಡ್, ಸಿದ್ದೀಕ್ ಕೊಳಕೆ, ಬಶೀರ್ ಪರ್ಲಡ್ಕ, ಶಮೀರ್ ಪರ್ಲಿಯಾ, ಶಾಕಿರ್ ಪಾವೂರ್, ಮುಖ್ತಾರ್ ಅಕ್ಕರಂಗಡಿ, ಜಲೀಲ್ ಉಪ್ಪಿನಂಗಡಿ ಹಾಗೂ ಸಂಸ್ಥೆಯ ಸದಸ್ಯರಾದ ಅಲಿ ಪರ್ಲಡ್ಕ, ಜಲೀಲ್ ಕಲ್ಲಡ್ಕ ದುಬೈ, ಅಶ್ರಫ್ ಮಲ್ಲಿ, ಫೈಝಲ್ ಸಂತೋಷ್ ನಗರ, ಅಬೂಬಕ್ಕರ್ ಆಂಬುಲೆನ್ಸ್, ಇಸ್ಮಾಯಿಲ್ ಅರಬಿ ಹಾಗೂ ಬಾಸಿತ್ ತುಂಬೆ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳಾದ ರಫೀಕ್ ಪರ್ಲಿಯಾ ಅವರು ನಿರೂಪಿಸಿದರು ಹಾಗೂ ಕೊನೆಯಲ್ಲಿ ಇಮ್ತಿಯಾಝ್ ಕೆದುಂಬಾಡಿ (ಗುಜರಾತ್) ಅವರು ಧನ್ಯವಾದಗೈದರು.