dtvkannada

ಬೆಂಗಳೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶವನ್ನು ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು ಪ್ರಕಟಿಸಿದ್ದಾರೆ.

ಕವನ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಪ್ರಮೀಳಾ ಎಸ್ ಪಿ ಹಾಸನ ಪಡೆದುಕೊಂಡಿದ್ದಾರೆ.
ದ್ವಿತೀಯ ಸ್ಥಾನವನ್ನು ಜಯಚಂದ್ರನ್ ಎಂ ಎಸ್ ಹಾಗೂ ತೃತೀಯ ಬಹುಮಾನವನ್ನು ಸಹನಾ ಗಿರೀಶ್ ಸುಳ್ಯ ಪಡೆದಿರುತ್ತಾರೆ.

ಅತ್ಯುತ್ತಮ ಬಹುಮಾನಕ್ಕೆ ವಾಣಿ ಶಿವಲಿಂಗಪ್ಪ ವಾರೀಮನಿ, ಮೀನಾಕ್ಷಿ ಸೂಡಿ, ಸುಜಾತ ರೈ ಪಿ ಜಿ ಕಡಬ, ಪರಿಮಳ ಎನ್ ಎಂ ಪುತ್ತೂರು, ದೇವರಾಜ್ ನಿಸರ್ಗತನಯ, ವಾಣಿ ಧಿನೇಶ್ ಸುಳ್ಯ, ರಮೇಶ್ ಹೆಗಡೆ ಕೆರೆಕೋಣ ಪಡೆದಿರುತ್ತಾರೆ. ರಾಜ್ಯಾಧ್ಯಂತ ಸುಮಾರು 220ಕ್ಕೂ ಮಿಕ್ಕ ಶಿಕ್ಷಕರು ಭಾಗವಹಿಸಿದ ಕವನ ಸ್ಪರ್ಧೆಯ ತೀರ್ಪುಗಾರರಾಗಿ ಯುವ ಕವಿ ಯಂಶ ಬೇಂಗಲ, ಆಯೋಜಕರಾಗಿ ಸಾಹಿತಿ ಶುಭಾ ವಿಷ್ಣು ಸಭಾಹಿತ ಹೊನ್ನಾವರ, ವೀಕ್ಷಕರಾಗಿ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ನಿರ್ವಹಿಸಿದರು ಎಂದು ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!