dtvkannada

'; } else { echo "Sorry! You are Blocked from seeing the Ads"; } ?>

ಅಹಮದಾಬಾದ್: ಮದುವೆಯಾದ ಹೆಂಡಿತಿಯನ್ನೇ ಕೇವಲ 500 ರೂ. ಆಸೆಗೆ ಮಾರಾಟ ಮಾಡಿರುವ ಹೀನ ಕೃತ್ಯವೊಂದು ಗುಜರಾತ್​ನಲ್ಲಿ ನಡೆದಿದೆ. 500 ರೂ. ನೀಡಿ ಆ ಮಹಿಳೆಯನ್ನು ಖರೀದಿಸಿದ ವ್ಯಕ್ತಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.

ನಂತರ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.ಊಟ ಕೊಡಿಸುತ್ತೇನೆಂದು ಹೇಳಿ ಹೆಂಡತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದ ಗಂಡ ಅಲ್ಲಿ ಸೋನು ಶರ್ಮ ಎಂಬಾತನಿಗೆ 500 ರೂ.ಗೆ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ. ಆತನ ಹೆಂಡತಿಯನ್ನು ಖರೀದಿಸಿದ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.

'; } else { echo "Sorry! You are Blocked from seeing the Ads"; } ?>
ಸಾಂದರ್ಭಿಕ ಚಿತ್ರ

ಅತ್ಯಾಚಾರ ನಡೆದ ಬಳಿಕ ಆ 21 ವರ್ಷದ ಮಹಿಳೆ ಪೊಲೀಸ್ ಠಾಣೆಗೆ ಬಂದು ತನ್ನ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಆ ದೂರಿನ ಆಧಾರದಲ್ಲಿ ಸೋನು ಶರ್ಮ ಹಾಗೂ ಆ ಮಹಿಳೆಯ ಗಂಡನನ್ನು ಬಂಧಿಸಲಾಗಿದೆ.ಹೋಟೆಲ್​ಗೆ ಬಂದಿದ್ದ ವ್ಯಕ್ತಿಯ ಜೊತೆಗಿದ್ದ ಆತನ ಹೆಂಡತಿಯನ್ನು ನೋಡಿದ ಸೋನು ಶರ್ಮ ಆಕೆಯನ್ನು ತನಗೆ ಕೊಡಬೇಕೆಂದು ಕೇಳಿದ್ದ.

ಅದಕ್ಕೆ ಒಪ್ಪಿದ ಆತ ಸೋನು ಶರ್ಮನಿಂದ 500 ರೂ. ಪಡೆದು ತನ್ನ ಹೆಂಡತಿಯನ್ನು ಆತನಿಗೆ ಮಾರಾಟ ಮಾಡಿದ್ದ. ಈ ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!