ಬೆಂಗಳೂರು: ನಟಿ ಪ್ರಿಯಾಂಕಾ ತಿಮ್ಮೇಶ್ ಬಿಗ್‍ಬಾಸ್ ಕಾರ್ಯಕ್ರಮ ಮುಗಿಸುತ್ತಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಈ ಮಧ್ಯೆ ಕ್ಯಾಮೆರಾಕ್ಕೆ ಪೋಸ್ ಕೊಡುವ ಮೂಲಕವಾಗಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.
ಹೌದು ಪ್ರಿಯಾಂಕಾ ಬೇಬಿ ಪಿಂಕ್ ಬಟ್ಟೆಯನ್ನು ತೊಟ್ಟು, ಕಿವಿಗೆ ಹೂವಿ ಓಲೆಯನ್ನು ತೊಟ್ಟು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಮ್ಮ PASSION ಹುಡುಕಲು ವಯಸ್ಸು ಮುಖ್ಯವಲ್ಲ ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಅವರ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಪ್ರಿಯಾಂಕಾ ಅವರ ಫೋಟೋಗಳಿಗೆ ನೆಟ್ಟಿಗರು ಸುಂದರ, ಕ್ಯೂಟ್, ಹಾಟ್, ನೀವು ಎಂದರೆ ನಮಗೆ ತುಂಬಾ ಇಷ್ಟ ಎಂದು ಕಾಮೆಂಟ್ ಮಾಡುತ್ತಾ ಮೆಟ್ಟುಗೆಯನ್ನು ಸೂಚಿಸುತ್ತಿದ್ದಾರೆ.
ಬಿಗ್‍ಬಾಸ್‍ನಿಂದ ಪ್ರಿಯಾಂಕಾ ತಿಮ್ಮೇಶ್‍ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಅಭಿಮಾನಿ ಬಳಗ ಈಗ ಮೊದಲಿಗಿಂತಲೂ ಹಿರಿದಾಗಿದೆ. ಹೀಗಿರುವಾಗಲೇ ಪ್ರಿಯಾಂಕಾ ತಿಮ್ಮೇಶ್ ಹೊಸ ಫೋಟೋಶೂಟ್‍ನಲ್ಲಿ ಮಿಂಚುತ್ತಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಕನ್ನಡ ಬಿಗ್ ಬಾಸ್ ಸೀಸನ್ 8 ಪ್ರವೇಶ ಪಡೆದ ಪ್ರಿಯಾಂಕಾ ತಿಮ್ಮೇಶ್ ಸಾಕಷ್ಟು ಮಿಂಚಿದರು. ತಮ್ಮ ನೇರನುಡಿಗಳಿಂದ ಅವರು ಹೆಸರು ಮಾಡಿದರು. ಬಿಗ್‍ಬಾಸ್ ಪ್ರಿಯಾಂಕಾ ತಿಮ್ಮೇಶ್‍ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.
ಪ್ರಿಯಾಂಕಾ ಒಂದು ಸಿನಿಮಾಕ್ಕಾಗಿ ತೂಕವನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಪಾತ್ರಕ್ಕೆ ಹೊಂದುವ ಹಾಗೆ ತೆರೆ ಮೇಲೆ ಕಾಣುವ ಉದ್ದೇಶದಿಂದ ನನ್ನ ದೇಹದ ತೂಕ ಹೆಚ್ಚಾಗಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.