dtvkannada

ಮಂಗಳೂರು: ನಗರದ ಮಣ್ಣಗುಡ್ಡೆಯ ಆರ್ಶೀವಾದ್ ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಗೆ ಬ್ಯಾಟ್ ನಿಂದ ಹಲ್ಲೆ ಮಾಡಿ, ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಬೋಜಪ್ಪನವರು ಕಲೆಕ್ಷನ್ ಆದ ಹಣ ಕಟ್ಟಲು ಬ್ಯಾಂಕಿಗೆ ಹೋಗುತ್ತಿದ್ದ ವೇಳೆ ಅದೇ ದಾರಿಯಲ್ಲಿ ಸಂಚು ಹಾಕಿ ಕಾಯುತ್ತಿದ್ದ ಅಪರಿಚಿತರು ಬೋಜಪ್ಪ ಅವರ ಮೇಲೆ ಬ್ಯಾಟಿನಿಂದ ಹಲ್ಲೆ ಮಾಡಿ, 4 ಲಕ್ಷದ 20 ಸಾವಿರ ನಗದನ್ನು ಕಸಿದುಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಊರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತು.

ಆರೋಪಿಗಳ ಜಾಡನ್ನು ಹತ್ತಿದ ಪೊಲೀಸರು, ಬೋಜಪ್ಪನವರ ಪೆಟ್ರೋಲ್ ಪಂಪ್ ನಲ್ಲೇ  ಕೆಲಸ ಮಾಡುತ್ತಿದ್ದ ಶ್ಯಾಮ್ ಶಂಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶ್ಯಾಮ್ ಶಂಕರ್ ನ ಮಾಹಿತಿಯಂತೆ ಇತರೆ ಆರೋಪಿಗಳಾದ ಅಭಿಷೇಕ್,ಕಾರ್ತಿಕ್ ಹಾಗೂ ಸಾಗರ್ ನನ್ನು ಬಂಧಿಸಿದ್ದಾರೆ.ಆರೋಪಿಗಳಿಂದ ಸುಲಿಗೆ ಮಾಡಿದ 60 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಅಭಿಷೇಕ್, ಕಾರ್ತಿಕ್ ಈ ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾದವರು.

By dtv

Leave a Reply

Your email address will not be published. Required fields are marked *

error: Content is protected !!