ಪುತ್ತೂರು: ಇಂದು ಸುಳ್ಯದಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಗಳೂರಿಗೆ ತೆರಳುವ ಮಧ್ಯೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಗೆ ಭೇಟಿ ನೀಡಿದರು.
ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉಡುಪಿ, ದ.ಕ., ಉ.ಕ. ಕೊಡಗು, ಜಿಲ್ಲೆಯಲ್ಲಿ ಕಳೆದ ಬಾರಿ ಕಾರಣಾಂತರಗಳಿಂದ ನಾವು ಸೋತಿದ್ದೇವೆ. ಒಂದೊಂದು ಸೀಟ್ ಮಾತ್ರ ಬಂದಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಅಡಿಪಾಯ ಗಟ್ಟಿಯಾಗಿತ್ತು. ನಾನು ಕೆಪಿಸಿಸಿ ಅಧ್ಯಕ್ಷನಾದ ಮೇಲೆ ನನ್ನ ಕಾರ್ಯಶೈಲಿಯನ್ನು ನೀವು ನೋಡುತ್ತಿರಬಹುದು. ತಳಮಟ್ಟದ ಕಾರ್ಯಕರ್ತನಿಂದ ಬೆಳೆದು ಇಂದು ಅಧ್ಯಕ್ಷನ ಸ್ಥಾನದಲ್ಲಿ ಕೂತಿದ್ದೇನೆ. ಎಲ್ಲಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಗೌರವ ಕೊಡುವುದಿಲ್ಲವೋ, ಕಾರ್ಯಕರ್ತರ ಧ್ವನಿಯನ್ನು ನಾವು ಕೇಳುವುದಿಲ್ಲವೋ, ಆಗ ಮಾತ್ರ ಕಾಂಗ್ರೆಸ್ ಯಶಸ್ವಿಯಾಗಲು ಸಾಧ್ಯ, ಕಾರ್ಯಕರ್ತರ ಧ್ವನಿಯೇ ಅಧ್ಯಕ್ಷರ ಧ್ವನಿಯಾಗಬೇಕು ಎಂದರು.
ಪುತ್ತೂರಿಗೆ ಆಗಮಿಸಿದ ಡಿ.ಕೆ ಶಿವಕುಮಾರ್‌ರವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ ಕೆ.ಬಿ, ನಗರ, ಜಿ.ಪಂ ಮಾಜಿ ಸದಸ್ಯ ಅನಿತಾ ಹೇಮನಾಥ ಶೆಟ್ಟಿ ಮೊದಲಾದವರು ಡಿ.ಕೆ ಶಿವಕುಮಾರ್‌ರವರನ್ನು ಶಾಲು, ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಬೆ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ನಗರ ಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ನಗರ ಸಭಾ ಸದಸ್ಯ ರಾಬಿನ್ ತಾವ್ರೋ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಸಂಚಾಲಕ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕಾಂಗ್ರೆಸ್ ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಮಹಾಬಲ ರೈ ವಲತ್ತಡ್ಕ, ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ, ನರಿಮೊಗರು ಗ್ರಾ.ಪಂ ಸದಸ್ಯ ಹೊನ್ನಪ್ಪ ಪೂಜಾರಿ ಕೈಂದಾಡಿ, ಮುಂಡೂರು ಗ್ರಾ.ಪಂಸದಸ್ಯ ಕಮಲೇಶ್, ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು, ಶರೂನ್ ಸಿಕ್ವೇರಾ, ಯುವ ಕಾಂಗ್ರೆಸ್ ಕಾರ್ಯದರ್ಶಿ ಹನೀಪ್ ಪುಣ್ಚತ್ತಾರು, ಬಶೀರ್ ಪರ್ಲಡ್ಕ, ಮಹೇಶ್ ಚಂದ್ರ ಸಾಲಿಯಾನ್, ರವಿ ಆಚಾರ್ಯ ಸಂಪ್ಯ, ನಾಗೇಶ್ ಆಚಾರ್ಯ, ರವೂಫ್ ಸಾಲ್ಮರ, ಮೋನು ಬಪ್ಪಳಿಗೆ, ಅಝ್ರತ್ ಬಪ್ಪಳಿಗೆ, ಹಂಝತ್ ಸಾಲ್ಮರ, ಕೊರಗಪ್ಪ ಗೌಡ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.