ಬೆಂಗಳೂರು: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಮಂಡಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದರು.
ರೈತರನ್ನು ಕೊಂದ ಕೊಲೆಗಡುಕರು ರಾಜಾರೋಷವಾಗಿ ತಿರುಗಾಡುತ್ತಿದ್ದು ಈ ತನಕ ಅವರನ್ನು ಬಂಧಿಸಲು ಸರ್ಕಾರ ವಿಫಲವಾಗಿದ್ದು, ತಕ್ಷಣ ಬಂಧಿಸದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಎಂ.ಟಿ ಗಿರೀಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಂಡಳಿ ಸದಸ್ಯರಾದ ಅಶೋಕ್ ಜಿಲ್ಲಾಧ್ಯಕ್ಷರು ಬೆಂಗಳೂರು, ಹರೀಶ್ ಜಿಲ್ಲಾಧ್ಯಕ್ಷರು ಬೆಂಗಳೂರು ಗ್ರಾಮಾಂತರ, ಮಹಮ್ಮದ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು, ಸೋಮಶೇಕರ್ ಹಾವೇರಿ ಜಿಲ್ಲಾಧ್ಯಕ್ಷರು, ಪುನಿತ್ ಹಾಸನ, ಮನೋಹರ್ ಮಂಡ್ಯ, ರಾಜೀವ್ ಬೆಳಗಾವಿ, ಪರಶುರಾಮ್ ತುಮಕುರು ಜಿಲ್ಲಾಧ್ಯಕ್ಷರು, ಮಷ್ಣ ರೆಡ್ಡಿ ರಾಮನಗರ ಜಿಲ್ಲಾಧ್ಯಕ್ಷರು, ಬಾಬಾಸಾಬ್ ರಾಮನಗರ, ಸಂತೋಷ್ ಹಾವೇರಿ,ಸತೀಶ್ ಸರ್ ರಾಮನಗರ, ಹರೀಶ್ ವಿಜಯನಗರ, ಪ್ರತಾಪ್ ಯಲಂಕ, ಶ್ರೀನಿವಾಸ ಬೆಂಗಳೂರು, ಶಿವು, ಪ್ರಸನ್ನ ಕುಮಾರ್ ಶಿವಮೊಗ್ಗ, ಕಾಂತಕುಮಾರ್ ರಾಮನಗರ, ಮಹೇಂದ್ರನಾಥ ಬೆಂಗಳೂರು, ಹೇಮಂತ್ ಬೆಂಗಳೂರು, ಶಾಕಿರ್ ಮಂಗಳೂರು, ಪರಶುರಾಮ್ ಹಾವೇರಿ ಉಪಸ್ಥಿತರಿದ್ದರು.