ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ದಿನಾಂಕ : 05-10-2021ರಂದು ಆನ್ಲೈನ್ ಕವಿಗೋಷ್ಠಿ ಅಯೋಜಿಸಲಾಗಿತ್ತು. ಕವಿಗೋಷ್ಠಿಯನ್ನು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಎಸ್. ಎಮ್. ಗಂಗಾಧರಯ್ಯ ಅವರು “ಗಾಂಧಿ ಮತ್ತು ಮೌಲ್ಯ” ಎನ್ನುವ ಕವನವನ್ನು ಓದುವುದರ ಮೂಲಕ ಕವಿಗೋಷ್ಠಿಯನ್ನು ಉದ್ಘಾಟಿಸಿ ಗಾಂಧೀಜಿಯವರ ಜೀವನ ಮೌಲ್ಯಗಳು ಪ್ರಸ್ತುತ ಸಮಾಜದ ಜನತೆಯ ಮೇಲೆ ಪ್ರಭಾವ ಬೀರಿವೆ. ಆದುದರಿಂದ ಗಾಂಧೀಜಿ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಹೇಳಿದರು.
ಕವಿಗೋಷ್ಠಿಯ ಸಂಘಟಕರಾದ ಡಾ. ಶೋಭಾ ನಾಯಕ ಅವರು ಗಾಂಧೀಜಿಯವರ ತತ್ವಗಳು ಹಾಗೂ ಜೀವನಾದರ್ಶಗಳು ಪ್ರಸ್ತುತ ಯುವಜನತೆಯ ಮೇಲೆ ಬೀರಿರುವ ಪ್ರಭಾವದ ಕುರಿತು ಮತ್ತು ಗಾಂಧಿ ತತ್ತ್ವಾನ್ವೇಷಣೆ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಮೀದಾ ಬಾನು ದೇಸಾಯಿ, ಬಸವರಾಜ ಹಡಪದ, ಆಶಾ ಯಮಕನಮರಡಿ, ಸಂತೋಷ ನಾಯಿಕ, ಡಾ. ಕವಿತಾ ಕುಸುಗಲ, ರಾಜು ಸನದಿ, ರಾಜನಂದ ಗಾರ್ಗಿ, ಗೌತಮ ಮಾಳಗೆ, ಮಮತಾ ಶಂಕರ, ರೇಖಾ ಕುಂಬಾರ, ಸುಜಾತ ಮತ್ತಿವಾಡ, ವಿಠ್ಠಲ ದಳವಾಯಿ, ನದೀಮ ಸನದಿ, ದೀಪಾ ಮಾಳಿ, ಸಿದ್ದರಾಮ ತಳವಾರ, ಸುನಂದಾ ಬರನಾಯಿಕರ, ಕೃಷ್ಣ ದೇವಾಂಗಮಠ ಅವರು ಗಾಂಧೀಜಿಯವರನ್ನು ಕುರಿತು ಕವನವಾಚನ ಮಾಡಿದರು.ಡಾ. ಹೊಂಬಯ್ಯ ಹೊಂಗಲಗೆರೆ ಅವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಗಾಂಧೀಜಿಯವರು ಇಂದಿನ ಉದಯೋನ್ಮುಖ ಕವಿಗಳು ಗಾಂದೀಜಿ ಕುರಿತು ಮರು ಓದುವುದು ಅವಶ್ಯಕ ಮತ್ತು ಗಾಂಧೀಜಿಯವರ ಜೀವನ ಮೌಲ್ಯಗಳು ಪ್ರಸ್ತುತ ಸಂದರ್ಭದಲ್ಲಿ ಇರುವ ಅವಶ್ಯಕತೆಯ ಕುರಿತು ಮಾತನಾಡಿದರು.
ಡಾ. ಗಜಾನನ ನಾಯ್ಕ ಅವರು ಸ್ವಾಗತಿಸಿದರು, ಡಾ. ಪಿ. ನಾಗರಾಜ ಅವರು ಅಧ್ಯಕ್ಷರನ್ನು ಪರಿಚಯಿಸಿದರು, ಸಂಶೋಧನಾರ್ಥಿಯಾದ ಕುಮಾರಿ. ರತ್ನಶ್ರೀ ಪುತಳೇಕರ ಕ ನಿರೂಪಿಸಿದರು, ಅಸ್ಲಾಂ ಮುಲ್ಲಾ, ಲಕ್ಷ್ಮೀ ದಡ್ಡಣ್ಣವರ್, ಪವಿತ್ರ ಗದ್ದನಕೇರಿ, ಸುಪ್ರಿಯಾ ಗುರವ, ಲಗಮಪ್ಪ ಅಂಕಲಗಿ, ರಮೇಶ ದಾಸನಟ್ಟಿ, ಹಾಗೂ ಗೋಪಾಲ ಕಟ್ಟೆಪ್ಪಗೊಳ ಅವರು ಕವಿಗಳನ್ನು ಪರಿಚಯಿಸಿದರು. ಡಾ. ಮಹೇಶ ಗಾಜಪ್ಪನವರ ಅವರು ವಂದಿಸಿದರು, ವಿಭಾಗದ ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.