ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ದ ಕೊಳ್ನಾಡು ಬ್ಲಾಕ್ ವತಿಯಿಂದ ಉತ್ತರ ಪ್ರದೇಶದ ಲಂಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ ನಾಲ್ಕು ಜನ ರೈತರ ಹತೈ ಮಾಡಿರುವುದನ್ನು ಖಂಡಿಸಿ ಸಾಲೆತ್ತೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತುಪ್ರತಿಭಟನ ಸಭೆಯ ಅಧ್ಯಕ್ಷತೆಯನ್ನು SDPI ಕೊಳ್ನಾಡು ಬ್ಲಾಕ್ ಅಧ್ಯಕ್ಷ ಬಶೀರ್ ಕೊಳ್ನಾಡು ವಹಿಸಿದ್ದರು
ಪ್ರತಿಭಟನೆಯನ್ನು ಉದ್ದೇಶಿಸಿ ವಿಟ್ಲ ಪಡ್ನೂರು ಪಂಚಾಯತ್ ಸದಸ್ಯ ಮೆಹಮೂದ್ ಕಡಂಬು ಪ್ರಾಸ್ತಾವಿಕ ಭಾಷಣ ಮಾಡಿದರುಡಿದರುಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ದ.ಕ ಜಿಲ್ಲಾ ಸಮೀತಿ ಕಾರ್ಯದರ್ಶಿ ಅಶ್ರಪ್ ಮಂಚಿ ಕೇಂದ್ರ ಸಚಿವ ಅಮಿತ್ ಮಿಶ್ರಾ ಬೆಂಗಾವಲು ವಾಹನದೊಂದಿಗೆ ಉದ್ದೇಶ ಪೂರ್ವಕವಾಗಿ ರೈತರ ಹತೈ ಮಾಡಿದ್ದಾರೆ ಕೂಡಲೆ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಮತ್ತು ಅವರ ಮೇಲೆ ಉನ್ನತ ಇಲಾಖೆಯಿಂದ ತನಿಖೆ ನಡೆಸಬೇಕು ಆಗ್ರಹಿಸಿದರು

ಈ ದೇಶದಲ್ಲಿ ರೈತರನ್ನು ಒಕ್ಕೂಟ ಸರಕಾರ ಸೇರಿಕೊಂಡು ಬೇಟೆಯಾಡುತಿದ್ದು ದೇಶದ ಜನರು ಒಗ್ಗೂಡಬೇಕಿದೆ ಎಂದು ಬಂಟ್ವಾಳ ಕ್ಷೇತ್ರ ಸಮೀತಿ ಉಪಾಧ್ಯಕ್ಷರಾದ ಕಲಂದರ್ ಪರ್ತಿಪ್ಪಾಡಿ ತಿಳಿಸಿದರು.
ಪ್ರತಿಭಟನೆ ಸಭೆ ವೇದಿಕೆಯಲ್ಲಿ SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮೀತಿ ಕೋಶಾದಿಕಾರಿ ಪೈಝಲ್ ಮಂಚಿ SDPI ಕೊಳ್ನಾಡು ಬ್ಲಾಕ್ ಸಮೀತಿ ಕಾರ್ಯದರ್ಶಿ ಅಲಿ ಕಡಂಬು ಬೊಳಂತೂರು ಪಂಚಾಯತ್ ಸದಸ್ಯರಾದ ಹಮೀದ್ ಬೊಳಂತೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರುಕಾರ್ಯಕ್ರಮವನ್ನು ನಿರೂಪಿಸಿದ D N ಫಾರೂಕ್ ಮಂಚಿ ಘೋಷಣೆಗಳನ್ನು ಕೂಗಿ ಕಾರ್ಯಕ್ರಮ ದ ಕೊನೆಗೆ ಧನ್ಯವಾದ ಸಲ್ಲಿಸಿದರು