ಪುತ್ತೂರು: ಮೊಸಳೆಯೊಂದು ಮನೆಯ ತೋಟದ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದು, ಮನೆಮಂದಿ ಗಾಭರಿಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಡಬದ ಪುನ್ಚಪ್ಪಾಡಿ ಎಂಬಲ್ಲಿ ನಡೆದಿದೆ.
ತೋಟದ ಕೆರೆಗೆ ಬಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂಧಿಗಳು ರಕ್ಷಿಸಿದ್ದಾರೆ.
ಕಡಬ ತಾಲೂಕು ಪುನ್ಚಪ್ಪಾಡಿ ಗ್ರಾಮದ ಕುಮಾರಮಂಗಲ ನಿವಾಸಿ ಚನಿಯವರ ತೋಟದಲ್ಲಿರುವ ಕೆರೆಗೆ ಮೊಸಳೆ ಬಿದ್ದಿರುವ ವಿಷಯವಾಗಿ ಆತಂಕಗೊಂಡ ಮನೆ ಮಂದಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಬಂದ ಪುತ್ತೂರು ಅರಣ್ಯ ಇಲಾಖೆಯ ಸಿಬ್ಬಂದಿ ಕ್ಷಿಪ್ರವಾಗಿ ಸ್ಥಳಕ್ಕೆ ತೆರಳಿ ಮೊಸಳೆಯನ್ನ ರಕ್ಷಣೆ ಮಾಡಿ ಮತ್ತೆ ಕುಮಾರಧಾರ ನದಿಗೆ ಬಿಟ್ಟಿದ್ದಾರೆ.