dtvkannada

ಬಂಟ್ವಾಳ, ಅ.9: ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರಲ್ಲಿ ಶುಕ್ರವಾರ 16ರ ಹರೆಯದ ಬಾಲಕಿಯನ್ನು ಪರಿಚಿತನೂ ಒಳಗೊಂಡಿದ್ದ ತಂಡವೊಂದು ಅಪಹರಿಸಿ ಆಕೆಯನ್ನು ಕೊಠಡಿಯೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ದೂರಲಾಗಿದ್ದು ಇದರ ಅನ್ವಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಘಟನೆ ಕುರಿತ ದೂರಿಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಬಾಲಕಿಗೆ ಪರಿಚಿತ ಶರತ್ ಶೆಟ್ಟಿ ಎಂಬಾತ ಕೂಡಾ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ವಿಚಾರಣೆ ನಡೆಸಿದಾಗ, ಅ.8ರಂದು ಬೆಳಗ್ಗೆ ಮನೆಯಿಂದ ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ಬಿಳಿ ಕಾರಿನಲ್ಲಿ ಬಂದ ಪರಿಚಿತ ಆರೋಪಿ ಇನ್ನಿತರರೊಂದಿಗೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ತಿಳಿದು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆ ಬಾಲಕಿ ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಬಾಲಕಿಯ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಾಲಕಿಯನ್ನು ಹುಡುಕಿ ಪುತ್ತೂರಿಗೆ ಬಂದಿದ್ದ ಬಾಲಕಿಯ ತಾಯಿ:

ನಿನ್ನೆ ಮಗಳು ಕಾಣೆಯಾದ ನಂತರ ಬಾಲಕಿಯನ್ನು ಹುಡುಕಿ ತಾಯಿ ಮತ್ತು ಸಹೋದರ ಪುತ್ತೂರಿಗೆ ಆಗಮಿಸಿದ್ದರು. ಬಾಲಕಿಯನ್ನು ಅಪಹರಿಸಿದ್ದ ಅಪಹರಣಕಾರರು, ಪುತ್ತೂರಿನ ರೆಸ್ಟೋರೆಂಟ್’ನಲ್ಲಿ ಬಾಲಕಿ ಇರುವುದಾಗಿ ತಿಳಿಸಿದ್ದಾರೆ. ಆ ಕೂಡಲೇ ಬಾಲಕಿಯನ್ನು ಹುಡುಕಿಕೊಂಡು ಪುತ್ತೂರಿಗೆ ಆಗಮಿಸಿದ್ದ ತಾಯಿ ಮತ್ತು ಸಹೋದರ ದಿಕ್ಕುತೋಚದೆ ನಗರದಲ್ಲಿ ಅಳುತ್ತಾ ಕೂತಿದ್ದರು. ಈ ಸಂದರ್ಭ ಬಾಲಕಿಯ ತಾಯಿಯಿಂದ ಘಟನೆಯ ಮಾಹಿತಿ ಪಡೆದ “ಡಿಟಿವಿ ಕನ್ನಡ” ತಂಡ ತಕ್ಷಣ ತಾಯಿ ಮತ್ತು ಸಹೋದರನನ್ನು ಪುತ್ತೂರಿನ ಮಹಿಳಾ ಠಾಣೆಗೆ ಕರೆದೊಯ್ದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ತಕ್ಷಣ ಕಾರ್ಯಪ್ರವೃತ್ತರಾಗಿ ಘಟನೆಯ ಜಾಡು ಹಿಡಿದು ಇದೀಗ ನಾಲ್ವರು ಆರೋಪಿಗಳನ್ನು ಬಂದಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!