dtvkannada

ಕುಂಬ್ರ: ವರ್ತಕರ ‌ಸಂಘ(ರಿ) ಕುಂಬ್ರ ಇದರ ‌ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಇಂದು ಸಂಜೆ ಕುಂಬ್ರ ಜಂಕ್ಷನ್’ನಲ್ಲಿ ನಡೆಯಿತು. ಸುಮಾರು 18 ವರ್ಷದ ಹಿಂದೆ ಸ್ಥಾಪನೆಗೊಂಡ ಈ ಸಂಘ ಯಶಸ್ವಿ 17 ವರ್ಷ ತುಂಬಿ 18 ನೇ ವರ್ಷಕ್ಕೆ ಪಾದಾರ್ಪಣೆಗೊಂಡ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ವರ್ತಕ ಸಂಘದ ಮಾಜಿ ಅಧ್ಯಕ್ಷರಾದ ದಿವಾಕರ ಶೆಟ್ಟಿ, ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಸ್ಥಾಪಕಧ್ಯಕ್ಷರಾದ ಶ್ಯಾಮ್ ಸುಂದರ್ ರೈ ಕೊಪ್ಪಳ, ವರ್ತಕರ ಸಂಘದ 17 ವರ್ಷದಿಂದ ಸಾಗಿ ಬಂದ ಆಗುಹೋಗುಗಳನ್ನು ಪ್ರಾಸ್ತಾವಿಕವಾಗಿ ವಿವರಿಸಿದರು.

ವರ್ತಕ ಸಂಘದ ಅಧ್ಯಕ್ಷರಾದ ಮಾಧವ ರೈ ಮಾತನಾಡಿ, ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕುಂಬ್ರದ ಎಲ್ಲಾ ವರ್ತಕರಿಗೆ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ವರ್ತಕರ ಸಂಘದ ಗೌರವ ಸಲಹೆಗಾರರು ಹಾಗೂ ಒಳಮೊಗ್ರು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಅರಿಯಡ್ಕ ಮಾತನಾಡಿ, ವರ್ತಕರ ಸಂಘದ ಕೆಲಸಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿದರು.

ಸುಮಾರು ವರ್ಷಗಳಿಂದ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸುತ್ತಾ, ಸಮಾಜ ಸೇವೆಯಲ್ಲಿ ತೊಡಗಿಸಿ, ಪರಿಸರದ ವಿದ್ಯುತ್ ಸಮಸ್ಯೆ, ದೂರವಾಣಿ ಸಮಸ್ಯೆ, ಪರಿಸರದ ಸ್ವಚ್ಛತೆ, ಧಾರ್ಮಿಕ ಕಾರ್ಯಕ್ರಮಗಳು, ಶೈಕ್ಷಣಿಕ ಸಮಸ್ಯೆಗಳಿಗೆ, ಕುಂಬ್ರದ ಎಲ್ಲಾ ವರ್ತಕರ ನೋವಿಗೆ ತಕ್ಷಣ ಸ್ಪಂದಿಸುತ್ತಾ ಕಾರ್ಯನಿರ್ವಹಿಸಿಕೊಂಡು ಬಂದಿರುವ ಈ ಸಂಘದ ಸವಿನೆನಪಿಗಾಗಿ ಮೂವರು ಹಿರಿಯ ವರ್ತಕರಾದ ಎಸ್ ಎಂ ಅಬ್ಬಾಸ್ ಶೇಖಮಲೆ, ಯಂ ಕೆ ಸುಬ್ರಾಯ ಭಟ್ ಹಾಗೂ ಮ್ಯಾನ್ವೇಲ್ ಮೊಂತೇರೋ’ರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ರಾಯ ಭಟ್, ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ತಮ್ಮ ಸಂಸ್ಥೆಗೆ ಸಹಕಾರ ನೀಡಿದ ಊರ ನಾಗರಿಕರಿಗೆ ಹಾಗೂ ಪ್ರತಿಯೊಂದು ಸಂದರ್ಭದಲ್ಲಿಯೂ ಬೆನ್ನೆಲುಬಾಗಿ ನಿಂತ ವರ್ತಕ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಗೌರವ ಸಲಹೆಗಾರರಾದ ಚಂದ್ರಕಾಂತ ಶಾಂತಿವನ ಮಾತನಾಡಿ, ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ವರ್ತಕರ ಸಂಘ ಹಲವಾರು ಸಮಾಜ ಸೇವೆಯಲ್ಲಿ ತೊಡಗಿಸಿ ಎಲ್ಲರ ನೋವಿಗೆ ಸ್ಪಂದಿಸುತ್ತಾ ಬಂದಿರುವ ವರ್ತಕರ ಸಂಘಕ್ಕೆ ಕಛೇರಿಯೊಂದರ ಅವಶ್ಯಕತೆಯಿದೆ ಎಂದರು.

ಶ್ಯಾಂ ಸುಂದರ್ ರೈ ಕೊಪ್ಪಳರಿಗೆ ಗೌರವಿಸುವಿಕೆ:ವರ್ತಕರ ಸಂಘದ ಸ್ಥಾಪಕಧ್ಯಕ್ಷರಾದ ಶ್ಯಾಂ ಸುಂದರ್ ರೈ ಕೊಪ್ಪಳರವರಿಗೆ ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು. ಸಂಘದ ಎಲ್ಲಾ ಕಾರ್ಯಕ್ರಮದಲ್ಲಿ ಸದಾ ಮುಂಚೂನಿಯಲ್ಲಿ ನಿಂತು ಕೈ ಜೋಡಿಸುವ ಸುಮಾರು 18 ವರ್ಷಗಳಿಂದ ವರ್ತಕರ ಜೊತೆ ಜೊತೆಯಾಗಿದ್ದುಕೊಂಡು, ಸಂಸ್ಥೆಯ ಬೆನ್ನೆಲುಬಾಗಿರುವ ಶ್ಯಾಂ ಸುದರ್ ಕೊಪ್ಪ ರಿಗೆ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಹೂಗುಚ್ಚ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವರ್ತಕ ಸಂಘದ ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ, ಮಾಜಿ ಕಾರ್ಯದರ್ಶಿಗಳಾದ ಸಂಶುದ್ದೀನ್ ಎ.ಆರ್, ರಮೇಶ್ ಆಳ್ವಾ ಕಲ್ಲಡ್ಕ, ಸದಸ್ಯರಾದ ಹನೀಫ್ ಭಾರತ್ ಸ್ಟೋರ್, ಪಿಕೆ ಮಹಮ್ಮದ್, ಹನೀಫ್ ಶೇಖಮಲೆ, ಪುರಂದರ ರೈ ಕೋರಿಕ್ಕಾರು, ಜಯರಾಮ ಆಚಾರ್ಯ, ಶ್ರುತಿ ಚಂದ್ರ ಗಾಣಿಗ ಮಿಲ್ ಉಪಸ್ಥಿತರಿದ್ದರು.ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಅಝರ್ ಷಾ ಕುಂಬ್ರ ಸ್ವಾಗತಿಸಿ, ಮೆಲ್ವಿನ್ ಮೊಂತೇರೊ ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!