dtvkannada

ಲಕ್ನೋ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಗೈದು, ನಂತರ ಬಲವಂತದ ಗರ್ಭಪಾತ ನಡೆಸಿದ ಘಟನೆ ಉತ್ತರ ಪ್ರದೇಶದ ಶೀಶ್ ಗಢ್ ನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಮದರಸಾ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಆಕೆ ನಾಲ್ಕು ವರ್ಷಗಳ ಹಿಂದೆ ಮದರಸಾಕ್ಕೆ ಬಂದಿದ್ದಳು. ಆರೋಪಿಯು ಆಕೆಯೊಂದಿಗೆ ಅಧ್ಯಯನ ಮಾಡುತ್ತಿದ್ದನು. ಆದರೆ ನಂತರ ಆತ ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.

ಮದುವೆಯಾಗುವಾಗಿ ಹೇಳಿ ಆರೋಪಿ ಶಿಕ್ಷಕ ಮಹಿಳೆಗೆ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದ. ಮಾತ್ರವಲ್ಲದೆ ಒತ್ತಾಯದ ಗರ್ಭಪಾತವನ್ನೂ ಮಾಡಿಸಲಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಮದರಸಾ ಶಿಕ್ಷಕನ ಮನೆಯೆ ಆಕೆ ಹೋದಾಗ ಆಕೆಗೆ ಜಿವ ಬೆದರಿಕೆ ಹಾಕಲಾಗಿದೆ ಮತ್ತು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿಲಾಗಿದೆ

By dtv

Leave a Reply

Your email address will not be published. Required fields are marked *

error: Content is protected !!