dtvkannada

ನವದೆಹಲಿ: ಚೀನಾ, ಪಾಕಿಸ್ತಾನ ಎರಡೂ ತಾಲಿಬಾನ್ ಜೊತೆ ಇವೆ. ತಾಲಿಬಾನ್ ಬದಲಾಗಬಹುದು, ಆದರೆ ಪಾಕಿಸ್ತಾನ ಬದಲಾಗಲ್ಲ. ತಾಲಿಬಾನ್ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಕಾಶ್ಮೀರದಲ್ಲಿ ಉಗ್ರಗಾಮಿಗಳು ಟಾರ್ಗೆಟ್ ಹತ್ಯೆ ಮಾಡುತ್ತಿದ್ದಾರೆ. ಜನರನ್ನು ಹೆದರಿಸಲು ಟಾರ್ಗೆಟ್ ಹತ್ಯೆ ಮಾಡಲಾಗುತ್ತಿದೆ. 370ನೇ ವಿಧಿ ರದ್ದಾದ ಬಳಿಕ ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿದೆ. ಅ. 20ರಂದು ರಷ್ಯಾ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಮಾತುಕತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲದಕ್ಕೂ ನಾವು ಸಿದ್ಧವಾಗಿರಬೇಕಾಗಿದೆ ಎಂದು ಮಹಾರಾಷ್ಟ್ರದ ನಾಗ್ಪುರ ಆರ್ಎಸ್ಎಸ್ ಕಚೇರಿಯಲ್ಲಿ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದೇಶದಲ್ಲಿ ಜನಸಂಖ್ಯಾ ಅಸಮತೋಲನ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜನಸಂಖ್ಯಾ ನೀತಿಯನ್ನು ಮತ್ತೊಮ್ಮೆ ಪರಿಗಣಿಸಿ, ಮುಂದಿನ 50 ವರ್ಷಗಳವರೆಗೆ ಹೊಸ ನೀತಿಯನ್ನು ರೂಪಿಸಬೇಕು ಮತ್ತು ಅದನ್ನು ಸಮಾನಾಗಿ ಪಾಲಿಸಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇಂದು ನಾಗಪುರದಲ್ಲಿ ವಿಜಯ ದಶಮಿ ಹಬ್ಬದ ಹಿನ್ನೆಲೆ ಮಾತನಾಡಿದ ಅವರು, ಸ್ವಾಧೀನತದಿಂದ ಸ್ವಾತಂತ್ರ್ಯದವರೆಗೂ ದೇಶದ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ. ಏಕೆಂದರೆ ಭಾರತ ಪ್ರಗತಿ ಮತ್ತು ಗೌರವಾನ್ವಿತ ಸ್ಥಾನಕ್ಕೆ ಜನಸಂಖ್ಯಾ ಅಸಮತೋಲನ ಅಡ್ಡಿಯನ್ನುಂಟು ಮಾಡುತ್ತಿದೆ.

ಸ್ವತಂತ್ರ ಭಾರತದ ಆದರ್ಶಗಳೊಂದಿಗೆ ಪ್ರಸ್ತುತ ಸನ್ನಿವೇಶವನ್ನು ಹೋಲಿಸಿದಾಗ ಮತ್ತು ವ್ಯತಿರಿಕ್ತಗೊಳಿಸಿದಾಗ, ಸ್ವಾಧೀನತದಿಂದ ಸ್ವಾತಂತ್ರ್ಯದವರೆಗೂ ನಮ್ಮ ಪ್ರಯಾಣ ಪೂರ್ಣಗೊಂಡಿಲ್ಲ. ಜಗತ್ತಿನಲ್ಲಿ ಭಾರತ ಪ್ರಗತಿ ಮತ್ತು ಗೌರವಾನ್ವಿತ ಸ್ಥಾನಕ್ಕೆ ಏರುವ ಅಂಶಗಳು ಅವರ ಪಟ್ಟಭದ್ರ ಹಿತಾಸಕ್ತಿಗಳಿಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.  

ನಾವು ಸಂಸ್ಕೃತಿಯನ್ನು ವಿಭಜನೆಗೊಳಿಸಲು ಇಷ್ಟಪಡುವುದಿಲ್ಲ. ಆದರೆ ರಾಷ್ಟ್ರವನ್ನು ಪ್ರೀತಿ ಎಂಬ ಸಂಸ್ಕೃತಿಯಿಂದ ಬಂಧಿಸುತ್ತೇವೆ. ಹೀಗಾಗಿ ಹುಟ್ಟುಹಬ್ಬದಂತೆ ಎಲ್ಲಾ ಹಬ್ಬಗಳನ್ನು ಕೂಡ ಒಟ್ಟಿಗೆ ಆಚರಿಸಬೇಕು. ದೇಶವನ್ನು ವಿಭಜನೆಗೊಳಿಸುವುದು ದುಃಖಕರವಾದ ಇತಿಹಾಸ, ಈ ಇತಿಹಾಸದ ಸತ್ಯವನ್ನು ಅರಿತು ಕಳೆದುಹೋದ ಸಮಗ್ರತೆ ಮತ್ತು ಏಕತೆಯನ್ನು ಮರಳಿ ತರಲು ಹೊಸ ಪೀಳಿಗೆಯವರು ಇತಿಹಾಸದ ಬಗ್ಗೆ ತಿಳಿದಿರಬೆಕು ಎಂದಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!