ಮಂಗಳೂರು: ತ್ರಿಶೂಲ ದೀಕ್ಷೆ ಹೆಸರಲ್ಲಿ ಹಿಂದೂ ಕಾರ್ಯಕರ್ತರಿಗೆ ಭಜರಂಗದಳದಿಂದ ಹಿಂದೂ ಕಾರ್ಯಕರ್ತರಿಗೆ ಶಸ್ತ್ರ ವಿತರಿಸಲಾಗಿದೆ. ಮಂಗಳೂರಿನ ಕದ್ರಿಯ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಚೂರಿ ಮಾದರಿಯ ತ್ರಿಶೂಲದಂತಹ ಶಸ್ತ್ರಗಳನ್ನು ಹಂಚಲಾಗಿದೆ.
ನಗರದ ಕದ್ರಿಯ ವಿಶ್ವ ಹಿಂದೂ ಪರಿಷತ್‌ನ ಮಾಧವ ಸಭಾಭವನದಲ್ಲಿ ನಡೆದ ಆಯುಧ ಪೂಜೆ ಕಾರ್ಯಕ್ರಮ ದಲ್ಲಿ ವಿಹಿಂಪ ಮುಖಂಡರು ಕಾರ್ಯಕರ್ತರಿಗೆ ‘ತ್ರಿಶೂಲ ದೀಕ್ಷೆ’ ನೀಡಿದ್ದಾರೆ.ವಿಶ್ವ ಹಿಂದೂ ಪರಿಷತ್ ಕಚೇರಿ ‘ವಿಶ್ವ ಶ್ರೀ’ಯಲ್ಲಿ ನಡೆದ ಆಯುಧ ಪೂಜೆಯ ಸಂದರ್ಭ ತ್ರಿಶೂಲ ಹಂಚಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಆಗುತ್ತಿದೆತ್ರಿಶೂಲ ದೀಕ್ಷೆ ಸಂದರ್ಭ ಬಜರಂಗದಳ ನಾಯಕ ರಘು ಸಕಲೇಶಪುರ, ವಿಹಿಂಪ ನಾಯಕ ಶರಣ್ ಪಂಪ್‌ವೆಲ್ ಮತ್ತಿತರರು ಪಾಲ್ಗೊಂಡಿದ್ದರು.