ಪುತ್ತೂರು: ಗುರುಕುಲಾ ಪ್ರತಿಷ್ಠಾನ ರಾಜ್ಯ ಸಮಿತಿ ಪತ್ರಿಕೋದ್ಯಮ ವಿಭಾಗಕ್ಕೆ ಕೊಡಲ್ಪಡುವ ಗುರುಕುಲ ಜ್ಞಾನ ಸಿಂಧು ಪ್ರಶಸ್ತಿಯನ್ನು ಹರೀಶ್ ಪುತ್ತೂರು ಪಡೆಯಲಿದ್ದಾರೆ.
ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು, ಗುರುಕುಲ ಕಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವೂ ದಿನಾಂಕ 17/10/2021 ರಂದು ತುಮಕೂರಿನ ಸಿದ್ದಾಗಂಗಾ ಮಠದ ಸಭಾಂಗಣದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹರೀಶ್ ಪುತ್ತೂರು ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಗುರುಕುಲಾ ಪ್ರತಿಷ್ಠಾನದ ರಾಜ್ಯಧ್ಯಕ್ಷರಾದ ಹುಲಿಯೂರುದುರ್ಗಾ ಲಕ್ಷ್ಮೀನಾರಾಯಣ ರವರು ತಿಳಿಸಿದ್ದಾರೆ.
ಬರವಣಿಗಳ ಮೂಲಕ ರಾಜ್ಯಾದ್ಯಂತ ಚಿರಪರಿಚಿತರಾಗಿರುವ ಹರೀಶ್ ರವರು ಒಬ್ಬ ಕಲಾವಿದರಾಗಿದ್ದು, ಚಿತ್ರ ಬರೆಯುವುದು, ಲೇಖನಗಳನ್ನು ಬರೆಯುವುದು ಹಾಗೂ ಶಾಲಾ ಮಕ್ಕಳಿಗೆ ನೃತ್ಯ ತರಬೇತಿ ನೀಡುವ ಹವ್ಯಾಸವನ್ನು ಹೊಂದಿದ್ದರು. ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ಈ ಬಾರಿ ಪತ್ರಿಕೋದ್ಯಮ ವಿಭಾಗಕ್ಕೆ ನೀಡುತ್ತಿರುವ ಪ್ರಶಸ್ತಿಗೆ ಹರೀಶ್ ರವರನ್ನು ಆಯ್ಕೆ ಮಾಡಿರುವುದು ಜಿಲ್ಲೆಗೆ ಸಂದ ಗೌರವ ವಾಗಿದೆ.
ಹರೀಶ್ ಪುತ್ತೂರು ರವರು ಕೊಡಿಯಾಲ ಗ್ರಾಮದ ಬಾಬು ಎಚ್ ಆರ್ ಹಾಗೂ ಕಮಲ ದಂಪತಿಯ ಪುತ್ರರಾಗಿದ್ದು ಪಬ್ಲಿಕ್ 24 ನ್ಯೂಸ್ ಕನ್ನಡ ವಾಹಿನಿಯ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.