ಮುಂಬೈ: ಡ್ರಗ್ಸ್ ಕೇಸ್‍ನಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಇನ್ನೆಂದೂ ಕೆಟ್ಟ ಹಾದಿ ತುಳಿಯಲ್ಲ, ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಅ.2 ರಂದು ಮಧ್ಯರಾತ್ರಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ರೇವ್‍ಪಾರ್ಟಿ ಮಾಡುತ್ತಿದ್ದ ವೇಳೆ ಎನ್‍ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ 23 ವರ್ಷದದ ಆರ್ಯನ್ ಖಾನ್, ಆಥೂರ್ ರಸ್ತೆ ಜೈಲಿನಲ್ಲಿದ್ದಾನೆ. ನಿನ್ನೆ ಆತನ ಜೊತೆ ಎನ್‍ಸಿಬಿ ಮತ್ತು ಸಾಮಾಜಿಕ ಕಾರ್ಯಕರ್ತರು ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಮುಂದೊಂದು ದಿನ ಕೆಟ್ಟ ಕಾರಣಕ್ಕೆ ಸುದ್ದಿಯಾಗುವ ಕೃತ್ಯದಲ್ಲಿ ನಾನು ಭಾಗಿಯಾಗಲ್ಲ. ಬಡವರಿಗೆ ಸಹಾಯ ಮಾಡುತ್ತೆನೆ, ಸಾಮಾಜಿಕ ಬಲವರ್ಧನೆಗೆ ಕೆಲಸ ಮಾಡುತ್ತೇನೆ ಎಂದು ಆರ್ಯನ್‍ಖಾನ್ ಹೇಳಿದ್ದಾನೆ.
ಆರ್ಯನ್ ಖಾನ್ ಜಾಮೀನು ಅರ್ಜಿ ತೀರ್ಪು ಅ.20 ರಂದು ಹೊರಬೀಳಲಿದೆ. ಇನ್ನು ನಾನು ಕೆಟ್ಟ ಹಾದಿ ತುಳಿಯಲ್ಲ, ಮುಂದಿನ ದಿನಗಳಲ್ಲಿ ಬಡವರು, ತುಳಿತಕ್ಕೊಳಗಾದವರ ಏಳಿಗೆಗಾಗಿ ಕೆಲಸ ಮಾಡುತ್ತೇನೆ. ಅಲ್ಲದೆ ಮುಂದೊಂದು ದಿನ ಎಲ್ಲರೂ ಹೆಮ್ಮೆ ಪಡುವಂತೆ ಬೆಳೆಯುತ್ತೇನೆ ಎಂದು (ಎಸ್‍ಸಿಬಿ ಅಧಿಕಾರಿಗಳ) ಮುಂಬೈ ವಲಯದ ನಿರ್ದೇಶಕ ಅಮೀರ್ ವಾಂಖೆಂಡೆ ಮುಂದೆ ಆರ್ಯನ್ ಖಾನ್ ಹೇಳಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.