dtvkannada

ಪುತ್ತೂರು, ಅ.17: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೆಟ್ಟಂಪಾಡಿ ಘಟಕದ ವತಿಯಿಂದ ರಕ್ತದಾನ ಶಿಬಿರ ರೆಂಜ ಬೆಟ್ಟಂಪಾಡಿ ಪಂಚಾಯತ್ ಸಭಾ ಭವನ ದಲ್ಲಿ ನಡೆಯಿತು.

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೆಟ್ಟಂಪಾಡಿ ಘಟಕ ಗೌರಧ್ಯಕ್ಷರಾದ ಹಮೀದ್ ಕೊಮ್ಮೆಮ್ಮರ್ ಸಭಾಧ್ಯಕ್ಷತೆ ವಹಿಸಿದ್ದರು. ಅಲ್ ಹಾಜ್ ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ದುಃವಾದೊಂದಿಗೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಪುತ್ತೂರು ಬ್ಲಡ್ ಬ್ಯಾಂಕ್ ನ ವೈದ್ಯಧಿಕಾರಿ ಡಾ ರಾಮಚಂದ್ರ ಭಟ್ ಪಾಪ್ಯುಲರ್ ಫ್ರಂಟ್ ನ ಮಾನವೀಯ ಸೇವೆಯನ್ನು ಶ್ಲಾಘಿಸಿದರು.ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೆಟ್ಟಂಪಾಡಿ ಕಾರ್ಯದರ್ಶಿ ಸಿದ್ದೀಕ್ ತಂಬುತ್ತಡ್ಕ ,ಯುವ ಉದ್ಯಮಿ ಫಾರೂಕ್ ಅಜ್ಜಿಕಲ್ಲು ಉಪಸ್ಥಿತರಿದರು.ಶೌಕತ್ ಅಲಿ ಸ್ವಾಗತಿಸಿ, ಸವಾದ್ ರೆಂಜ ಧನ್ಯವಾದ ಸಲ್ಲಿಸಿದರು.ರಕ್ತದಾನ ಶಿಬಿರದಲ್ಲಿ ಒಟ್ಟು 37 ಯುನಿಟ್ ರಕ್ತ ಸಂಗ್ರಹವಾಯಿತು

By dtv

Leave a Reply

Your email address will not be published. Required fields are marked *

error: Content is protected !!