dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಸಂಯುಕ್ತ ಖಾಝಿ ನೇಮಕ ವಿಚಾರದಲ್ಲಿ ಮಸೀದಿಯಲ್ಲಿ ಕರೆದಿದ್ದ ಸಭೆಯಲ್ಲಿ ನೂಕುನುಗ್ಗಲು ನಡೆದು, ಹಲ್ಲೆಗೆ ಮುಂದಾದ ಘಟನೆ ಅ.15 ರಂದು ಪುತ್ತೂರು ಬದ್ರ್ ಮಸೀದಿಯಲ್ಲಿ ನಡೆದಿತ್ತು. ಚರ್ಚೆ, ಮಾತಿನ ಚಕಮಕಿ, ಪರಸ್ಪರ ಹೊಕೈ ನಡೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಮಾತ್ರವಲ್ಲದೇ ಉಲಮಾರ ಹೆಸರನ್ನು ಅಡಿಬರಹದಲ್ಲಿ ದುರ್ಬಳಕೆ ಮಾಡಿ ತೇಜೋವಧೆ ಮಾಡಿದ್ದರು.

ಇದರ ಕುರಿತು ಪುತ್ತೂರು ಕೂರ್ನಡ್ಕ ಖಾಝಿ ಬಂಬ್ರಾಣ ಉಸ್ತಾದರು ವಿಷಾದ ವ್ಯಕ್ತಪಡಿಸಿದ್ದಾರೆ. ಸಂಯುಕ್ತ ಖಾಝಿ ನೇಮಕ ವಿಚಾರದ ಬಗ್ಗೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪರಸ್ಪರ ದೋಷಾರೋಪ ಹೊರಿಸುವ ಸಂದರ್ಭದಲ್ಲಿ ಅನಗತ್ಯವಾಗಿ ನನ್ನ ಹೆಸರು ದುರ್ಬಳಕೆ ಮಾಡುತ್ತಿರುವ ವಿಷಯ ತಿಳಿಯಿತು. ನನಗೂ ಈ ಚರ್ಚೆಗಳಿಗೂ ಯಾವುದೇ ಸಂಬಂಧವಿಲ್ಲ. ಸಯ್ಯದುಲ್ ಉಲಮಾರಂತಹ ಮಹಾನ್ ಪಂಡಿತ, ಸಮಸ್ತದ ಸರ್ವೋಚ್ಚ ನಾಯಕ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಪುತ್ತೂರು ತಾಲೂಕಿನ ಸಂಯುಕ್ತ ಖಾಝಿಯಾಗಿ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿರುವುದು ನಮ್ಮೆಲ್ಲರ ಭಾಗ್ಯ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ತಿಳಿಸಿದರು.

'; } else { echo "Sorry! You are Blocked from seeing the Ads"; } ?>

ಅವರ ಒಪ್ಪಿಗೆ ಪಡೆಯಲು ಅನೇಕ ಸಮಯಗಳಿಂದ ಪ್ರಯತ್ನ ನಡೆಸಿದ್ದು, ಸತತ ಪ್ರಯತ್ನಗಳ ನಂತರ ತಂಙಳ್ ಅವರು ಒಪ್ಪಿಗೆ ನೀಡಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಕೋವಿಡ್ ಕಾರಣದಿಂದಾಗಿ ನಿಗದಿತ ಕಾರ್ಯಕ್ರಮ ನಿರೀಕ್ಷೆಯಂತೆ ನಡೆಯದೆ ಮುಂದಕ್ಕೆ ಹೋಗಿರುವುದು ನಮಗೆಲ್ಲಾ ತಿಳಿದಿದೆ. ಇದೀಗ ಅಕ್ಟೋಬರ್ 29ರಂದು ಖಾಝಿ ಸ್ವೀಕಾರ ಸಮಾರಂಭ ನಿಗದಿಯಾಗಿದ್ದು, ಸುನ್ನತ್ ಜಮಾಅತಿನ ಎಲ್ಲಾ ಕಾರ್ಯಕರ್ತರು ಇದಕ್ಕೆ ಸಹಕರಿಸಬೇಕು. ನಾನು ಕೂರ್ನಡ್ಕ ಖಾಝಿಯಾಗಿದ್ದರೂ, ನಮ್ಮ ಪರಮೋಚ್ಚ ನಾಯಕ ಜಿಫ್ರಿ ತಂಙಳ್‌ರವರ ಖಾಝಿ ಸ್ವೀಕಾರ ಸಮಾರಂಭಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿ ಸಹಕರಿಸಲಾಗುತ್ತಿದೆ. ಸಯ್ಯಿದುಲ್ ಉಲಮಾರ ಮುಂದೆ ನಾನು ಖಾಝಿಯಾಗಬೇಕೆಂಬ ಸ್ಪರ್ಧೆ ಯಾವತ್ತೂ ಇಲ್ಲ. ಅಂತಹ ಒಂದು ವಾತಾವರಣ ಸೃಷ್ಟಿಸಲು ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುವುದರ ಬಗ್ಗೆ ನನ್ನ ವಿರೋಧವಿದೆ. ಎಲ್ಲರೂ ಸಹಕರಿಸಬೇಕೆಂದು ಅವರು ವಿನಂತಿಸಿಕೊಂಡರು.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!