ಪುತ್ತೂರು: ಪುತ್ತೂರಿನ ಸಾಲ್ಮರದಲ್ಲಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಅಮಾಯಕ ವಿಧ್ಯಾರ್ಥಿಗಳ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದು. ಇದನ್ನು ಯುವ ಕಾಂಗ್ರೆಸ್ ನಗರ ಸಮಿತಿ ಖಂಡಿಸಿದೆ.
ಈಗಾಗಲೇ ಜಾಲತಾಣಗಳಲ್ಲಿ ಹಲ್ಲೆಕೋರರು ಬಂದ ವಾಹನಾದ ನಂಬರ್ ವೈರಲ್ ಆಗುತ್ತಿದೆ, ಇದರ ಆಧಾರದಲ್ಲಿ ಪೋಲಿಸರು ಆರೋಪಿಗಳನ್ನು ತಕ್ಷಣ ಬಂದಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಪುತ್ತೂರು ನಗರ ಸಮಿತಿ ಅಧ್ಯಕ್ಷ ಮೋನು ಬಪ್ಪಳಿಗೆ ಆಗ್ರಹಿಸಿದ್ದಾರೆ.
ಸಮಾಜದಲ್ಲಿ ಅನಗತ್ಯ ಅಶಾಂತಿ ಸೃಷ್ಟಿಸುತ್ತಿರುವ ಹಲ್ಲೆಕೋರರು ಯಾವುದೇ ಧರ್ಮದವರಾದರೂ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.