ಮಂಗಳೂರು: ತನ್ನ ಕಛೇರಿಗೆ ಬರುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ವಕೀಲನೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಉರ್ವ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಹೆಡ್‌ಕಾನ್ಸ್ಟೇಬಲ್ ಅಮಾನತುಗೊಂಡಿದ್ದಾರೆ.
ವಕೀಲರಾದ ಕೆಎಸ್ ರಾಜೇಶ್ ಭಟ್ ವಿರುದ್ಧ ಇತ್ತೀಚಿಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಪ್ರಕರಣ ದಾಖಲಾಗಿತ್ತು. ಕಛೇರಿಯಲ್ಲಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಸಂತ್ರೆಸ್ತೆ ದೂರು ನೀಡಿದ್ದಳು.ವಕೀಲ ಕೆ.ಎಸ್.ಎನ್ ರಾಜೇಶ್ ಭಟ್ ನಿಂದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇದೀಗ ಪವಿತ್ರ ಆಚಾರ್ ಹಾಗೂ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಪಿಎಸ್ ಐ ಶ್ರೀಕಲಾ ಎಂಬವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪವಿತ್ರ ಆಚಾರ್ಯ ಎಂಬವರು ಸಂತ್ರಸ್ತ ಯುವತಿಯನ್ನು ಠಾಣೆಗೆ ಕರೆಸಿ ನಿನಗೆ ನ್ಯಾಯ ಕೊಡಿಸುತ್ತೇನೆಂದು ಕರೆಸಿ ಬೆದರಿಕೆ ಮುಚ್ಚಳಿಕೆ ಬರೆಸಿಕೊಂಡು ಹೆಬ್ಬೆಟ್ಟು ಸಹಿ ಹಾಕಿಸಿದ್ದರು.ಇದಕ್ಕೆ ಉರ್ವ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಕಲಾ, ಹೆಚ್.ಸಿ ಪ್ರಮೋದ್ ಬೆಂಬಲ ನೀಡಿದ್ದರು ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅಮಾನತು ಆದೇಶ ಹೊರಡಿಸಿದ್ದಾರೆ.