dtvkannada

ಕಲಬುರಗಿ: ಮಗುವಿಗೆ ಹಾಲು ಕುಡಿಸುತ್ತಿದ್ದಾಗ ಪತ್ನಿಯನ್ನು ಪತಿ ಹತ್ಯೆಗೈದ ದಾರುಣ ಘಟನೆ ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ. ನಸೀಮಾ ಬೇಗಂ(35) ಕೊಲೆಯಾದ ಮಹಿಳೆ. ಪತಿ ಇಬ್ರಾಹಿಂ ನಸೀಮಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಕುಡಿದ ಮತ್ತಿನಲ್ಲಿ ಪತ್ನಿಯನ್ನು ಹತ್ಯೆಗೈದ ಇಬ್ರಾಹಿಂನ ಅರೆಸ್ಟ್ ಮಾಡಲಾಗಿದೆ.ಆರೋಪಿ ಪತಿ ಕುಡಿಯುವುದಕ್ಕಾಗಿ ತವರು ಮನೆಯಿಂದ ದುಡ್ಡು ತರುವಂತೆ ಪೀಡಿಸುತ್ತಿದ್ದ. ತವರು ಮನೆಯಿಂದ ದುಡ್ಡು ತರದ ಹಿನ್ನೆಲೆ ಮಗುವಿಗೆ ಹಾಲು ಕುಡಿಸುವಾಗಲೇ ಗಂಡ ಕೊಲೆ ಮಾಡಿದ್ದಾನೆ.ಸದ್ಯ ಈ ಪ್ರಕರಣ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!