ಮಂಗಳೂರು: ಮಾನಸಪ್ರವೀಣ್ ಭಟ್ ಅವರ ಸಾಹಿತ್ಯ ಸಂಘಟನೆಯನ್ನು ಗುರುತಿಸಿ ಕಥಾ ಬಿಂದು ಪ್ರಕಾಶನ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದಲ್ಲಿ ಖ್ಯಾತ ಕಾದಂಬರಿಗಾರರಾದ ಪಿ ವಿ ಪ್ರದೀಪ್ ಇವರ ನೇತೃತ್ವದಲ್ಲಿ ಕಥಾಬಿಂದು ಪ್ರಕಾಶನ 14 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಿದ್ದು ಇಲ್ಲಿ ಅನೇಕ ಸಾಧಕರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳೊಂದಿಗೆ ಗುರುತಿಸುತ್ತಿದ್ದಾರೆ.
ವಿವಿಧ ಪ್ರಶಸ್ತಿಗಳಲ್ಲಿ ಒಂದಾದ ಸೌರಭ ರತ್ನ – 2021 ಪ್ರಶಸ್ತಿಗೆ ಬರಹಗಾರ್ತಿ ಸಂಘಟಕಿ ಆದ ಮಾನಸಪ್ರವೀಣ್ ಭಟ್ ಮಾಂಟ್ರಾಡಿ ಮೂಡಬಿದ್ರೆ ಇವರಿಗೆ ಕಥಾಬಿಂದು ಪ್ರಕಾಶನ ಹಾಗೂ ತುಳು ಕನ್ನಡ ಸಾಹಿತ್ಯ ಅಕಾಡೆಮಿ ಪರವಾಗಿ ಸೌರಭ ರತ್ನ 2021 ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಕಥಾ ಬಿಂದು ಪ್ರಕಾಶನ ಸಂಸ್ಥಾಪಕರಾದ ಪಿ ವಿ ಪ್ರದೀಪ್ ಕುಮಾರ್ ಇವರು ತಿಳಿಸಿದ್ದಾರೆ.