ಉಳ್ಳಾಲ: ಕೆಲವು ದಿನಗಳ ಹಿಂದೆ ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ಬಳಿಯ ಬಂಗಲೆಗೆ ನುಗ್ಗಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ದೀಪಗಳನ್ನ ಕಳವುಗೈದ ಪ್ರಕರಣದ ಆರೋಪಿಗಳನ್ನು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮದನಿನಗರ ನಿವಾಸಿಗಳಾದ ಆಸ್ವೀರ್ (22) ಮತ್ತು ನಿಝಾಮುದ್ದೀನ್ (23) ಎಂದು ಗುರುತಿಸಲಾಗಿದೆ.
ದುಬೈನಲ್ಲಿ ವಾಸವಿರುವ ಸುಜಾತ ಎಂಬವರಿಗೆ ಸೇರಿದ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿದ್ದರು ಎಂದು ಸುಜಾತ ಅವರ ಅಣ್ಣ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ರಾತ್ರಿ ಬಗಂಬಿಲ ಬಳಿ ಆರೋಪಿಗಳನ್ನು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.