';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಲಖನೌ: ಅಯೋಧ್ಯೆಯಲ್ಲಿರುವ ಪ್ರಮುಖ ನಗರವಾದ ಫೈಜಾಬಾದ್ ಹೆಸರನ್ನು ಬದಲಿಸಲು ಯೋಗಿ ಸರಕಾರ ತೀರ್ಮಾನಿಸಿದೆ. ಫೈಜಾಬಾದ್ ರೈಲ್ವೆ ಸ್ಟೇಶನ್ ಹೆಸರನ್ನು ಬದಲಿಸಿ ಅದಕ್ಕೆ ಅಯೋಧ್ಯಾ ಕೈಂಟ್ ಎಂದು ಮರುನಾಮಕರಣ ಮಾಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಈಗಾಗಲೇ ಹಲವು ಪ್ರದೇಶಗಳ ಹೆಸರನ್ನು ಬದಲಿಸಿದ್ದಾರೆ. ಇದೇ ಕಾರಣಕ್ಕೆ ಹಲವು ಭಾರಿ ಅವರು ಟೀಕೆಗೆ ಗುರಿಯಾಗಿದ್ದರು.
ಫೈಜಾಬಾದ್ ರೈಲ್ವೆ ಸ್ಟೇಶನ್ನ ಹೆಸರನ್ನು ಅಯೋಧ್ಯಾ ಕೈಂಟ್ ಆಗಿ ಬದಲಿಸಲು ಪ್ರಸ್ತಾವನೆ ಇಡಲಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಮರುನಾಮಕರಣ ಆಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
#UPCM श्री @myogiadityanath जी ने फैजाबाद रेलवे जंक्शन का नाम "अयोध्या कैन्ट" करने का निर्णय लिया है। @spgoyal@sanjaychapps1@74_alok pic.twitter.com/P8qg4Gc2P3
— CM Office, GoUP (@CMOfficeUP) October 23, 2021