dtvkannada

'; } else { echo "Sorry! You are Blocked from seeing the Ads"; } ?>

ನವದೆಹಲಿ: ಮಾದಕ ವಸ್ತು ಖರೀದಿ, ಮಾರಾಟ, ಸೇವೆನೆ ವಿದುದ್ಧ ಕಠಿಣ ಕ್ರಮಕ್ಕೆ ದೇಶಾದ್ಯಂತ ಒತ್ತಾಯ ಹೆಚ್ಚುತ್ತಿರುವ ನಡುವೆಯೇ, ವೈಯಕ್ತಿಕ ಉದ್ದೇಶಕ್ಕಾಗಿ ಸಣ್ಣಪ್ರಮಾಣದ ಡ್ರಗ್ಸ್ ಸೇವಿಸುತ್ತಿರುವ ವ್ಯಕ್ತಿಗಳನ್ನು ಅಪರಾಧದಿಂದ(ಜೈಲು ಶಿಕ್ಷೆಯಿಂದ) ಹೊರಗಡೆ ಇಡುವ ಮಹತ್ವ ಶಿಫಾರಸನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಮಾಡಿದೆ.

ಈ ಶಿಫಾರಸನ್ನು ಕೇಂದ್ರ ಕಂದಾಯ ಇಲಾಖೆಗೆ ಕಳಿಸಲಾಗಿದ್ದು, ಮಾದಕ ವಸ್ತು ನಿಗ್ರಹ ಕಾಯ್ದೆಎನ್‍ಡಿಪಿಎಸ್( Narcotic Drugs and Psychotropic Substances Act)ತಿದ್ದು ಪಡಿ ಮಾಡಬೇಕು ಎಂದು ತಿಳಿಸಿದೆ.ಇದೀಗ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

'; } else { echo "Sorry! You are Blocked from seeing the Ads"; } ?>

ಇದಕ್ಕೂ ಮುನ್ನ ಕನ್ನಡದ ಚಿತ್ರರಂಗದ ಹಲವು ಕಲಾವಿದರು ಕೂಡಾ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಈ ಹೊಸ ಪ್ರಸ್ತಾಪಕ್ಕೆ ಮಹತ್ವ ಬಂದಿದೆ. ಈಗ ಇರುವ ಎನ್‍ಡಿಪಿಎಸ್(NDPS) ಕಾಯ್ದೆ ಪ್ರಕಾರ ಮಾದಕ ವಸ್ತು ವ್ಯಸನಿಗಳನ್ನು ಅಪರಾಧಿಗಳು ಎಂದೇ ಪರಿಗಣಿಸಲಾಗುತ್ತದೆ.

ಆದರೆ ತಾವಾಗೇ ಈ ವ್ಯಸನಿಗಳು ಮನಃಪರಿವರ್ತನೆ ಮಾಡಿಕೊಂಡು ಮರುವಸತಿ ಕೇಂದ್ರಗಳಲ್ಲಿ ತಮ್ಮ ಚಟವನ್ನು ಬಿಟ್ಟರೆ ಅವರಿಗೆ ತನಿಖೆ ಹಾಗೂ ಜೈಲಿನಿಂದ ವಿನಾಯ್ತಿ ದೊರಕುತ್ತದೆ.

'; } else { echo "Sorry! You are Blocked from seeing the Ads"; } ?>

ಈಗ ಹೊಸ ಪ್ರಸ್ತಾವದ ಪ್ರಕಾರ, ವೈಯಕ್ತಿಕ ಕಾರಣಗಳಿಗೆ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಕೊಡಿಸಬೇಕು. ಜೈಲುವಾಸದ ಬಲೆಗೆ ಈ ಆಯ್ಕೆಯುನ್ನು ಅವರಿಗೆ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಈಗಿನ ಎನ್‍ಡಿಪಿಎಸ್ ಕಾಯ್ದೆಯ 27ನೇ ಪರಿಚ್ಛೇದ ಹೇಳುವಂತೆ ಯಾವುದೇ ಮಾದಕ ವಸ್ತು ಇಟ್ಟುಕೊಂಡವರಿಗೆ 1ವರ್ಷದವರೆಗೆ ಕೈಲು ಶಿಕ್ಷೆ ಹಾಗೂ 20 ಸಾವಿರವರೆಗೆ ದಂಡ ವಿಧಿಸಲಾಗುತ್ತಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!