dtvkannada

ದುಬೈ: ನಿನ್ನೆ ದುಬೈ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ಬೌಲರ್’ಗಳು ವಿಕೆಟ್ ಪಡೆಯದೇ ಇದ್ದಿದ್ದು, ಕ್ರೀಡಾಬಿಮಾನಿಗಳಿಗೆ ಬಹಳ ದುಃಖವಾಗಿತ್ತು . ಆದರೆ ಕೆಲವರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ವೇಗಿ ಶಮಿ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದರು. ಮಹಮ್ಮದ್ ಶಮಿ ಅವರ ಇನ್ಸ್ಟಾಗ್ರಾನ್ ಪೋಟೋ ಒಂದಕ್ಕೆ ಬಹಳ ಕೆಟ್ಚದಾಗಿ ಕಾಮೆಂಟ್ ಹಾಕಿದ್ದರು .

ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹಿರಿಯ ಕ್ರಿಕೆಟಿಗರು ಸೇರಿ ಹಲವು ದಿಗ್ಗಜರು ಬೆಂಬಲ ಸೂಚಿಸಿದ್ದಾರೆ. ದ್ವೇಷಪೂರಿತ ಪೋಸ್ಟ್ ಹಾಕಿದವರ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಹಿರಿಯ ಕ್ರಿಕೆಟಿಗ ಸೆವ್ವಾಗ್ ಟ್ವೀಟ್ ಮಾಡಿ, ಶಮಿ ಅವರ ವಿರುದ್ದ ನಾವಿದ್ದೇವೆ. ಅವರ ವಿರುದ್ದ ಆನ್’ಲೈನ್ ದಾಳಿ ಅಘಾತಕಾರಿಯಾಗಿದೆ. ಶಮಿ ಒಬ್ಬ ಚಾಂಪಿಯನ್. ಮುಂದಿನ ಪಂದ್ಯದಲ್ಲಿ ಮ್ಯಾಜಿಕ್ ತೋರಿಸಿ ಎಂದು ಹೇಳಿದ್ದಾರೆ.

ಕ್ರಿಕೆಟ್ ಕಾಮೆಂಟಿಗ ಹರ್ಷ ಬೋಗ್ಲೆ ಟ್ವೀಟ್ ಮಾಡಿ, ಶಮಿ ವಿರುದ್ದ ಕೆಟ್ಟದಾಗಿ ಮಾತನಾಡುವವರಿಗೆ ನನ್ನದೊಂದು ಧಿಕ್ಕಾರ. ನೀವು ದಯವಿಟ್ಟು ಕ್ರಿಕೆಟ್ ನೋಡಬೇಡಿ ಎಂದು ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ನಿಮ್ಮ ವಿರುದ್ಧ ಧ್ವೇಷಕಾರುವವರಿಗೆ ಕ್ಷಮೆ ನೀಡಿ . ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ.

ಭಾರತದ ವೇಗಿ ಮಹಮ್ನದ್ ಶಮಿ ಪರ ಹರ್ಭಜಾನ್ ಸಿಂಗ್, ಚಹಾಲ್, ಇರ್ಫಾನ್ ಪಠಾನ್ ಸೇರಿ ಹಲವು ದಿಗ್ಗಜರು ಬೆಂಬಲ ಸೂಚಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!