ಬಂಟ್ವಾಳ, ಅ.27: ಜೆ.ಸಿ.ಐ ಜೋಡುಮಾರ್ಗ ನೇತ್ರಾವತಿ, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಯೆನಪೋಯ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಸಹಬಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಇಂದು ಬಿ.ಸಿ ರೋಡ್ ನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಸ್ವಾತಿ ಕ್ಲಿನಿಕ್ ಮತ್ತು ವಕೀಲರ ಕಛೇರಿಯಲ್ಲಿ ಯಶಸ್ವಿಯಾಗಿ ಜರುಗಿತು.
ಕೊರೋನ ಮುಂಜಾಗೃತಾ ಕ್ರಮವನ್ನು ಪಾಲಿಸಿ ಕೊಂಡು ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 29 ಜನಸ್ನೇಹಿ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಜೀವ ಕಾರುಣ್ಯ ಸೇವೆಯಲ್ಲಿ ಪಾಲ್ಗೊಂಡರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೆನೆಪೋಯ ಆಸ್ಪತ್ರೆಯ ರಕ್ತನಿಧಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಅಡ್ವಕೇಟ್ ಶ್ರೀಮತಿ ಶೈಲಜಾ ರಾಜೇಶ್( ಸಂಸ್ಥಾಪಕರು ವಾತ್ಸಲ್ಯಮಯಿ ಮಹಿಳಾ ಅಭಿವ್ರದ್ದಿ ಮತ್ತು ಸಂಶೋಧನಾ ಸಂಸ್ಥೆ) ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮವನ್ನು ಡಾ| ರಾಜೇಶ್ ಪೂಜಾರಿ ಉದ್ಘಾಟನೆಗೈದರು.
ಅತಿಥಿಗಳಾಗಿ ಶ್ರೀ ಧರ್ಮೇಂದ್ರ,ಶ್ರೀ ಚಂದ್ರಶೇಖರ್ ಪೂಜಾರಿ, ಶ್ರೀ ನಿಧಿ ಭಟ್, ಡಾ.ವಿದ್ಯಾ, ಇಮ್ರಾನ್ ಅಡ್ಡೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.
ರೋಗಿಗಳ ಅವಶ್ಯಕತೆಗಾಗಿ ಧಾವಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಊರಿನ ಸರ್ವ ಸಹೃದಯೀ ದಾನಿಗಳಿಗೂ ರಕ್ತನಿಧಿಯ ಸಿಬ್ಬಂದಿಗಳಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಜನಸ್ನೇಹಿಗಳಿಗೂ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಂಘಟಕರು ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮವನ್ನು ಅಡ್ವಕೇಟ್ ಶೈಲಜಾ ರಾಜೇಶ್ ನಿರೂಪಿಸಿದರು.