ದೋಹ: ಕತಾರ್ ಇಂಡಿಯನ್ ಸೋಷಿಯಲ್ ಫೋರಮ್(QISF) ನ, ರಾಷ್ಟೀಯ ಪಧಾಧಿಕಾರಿಗಳ ಸಭೆಯಲ್ಲಿ, ಮುಂದಿನ ಮೂರು ವರ್ಷದ ಅವಧಿಗೆ, ಕೇಂದ್ರೀಯ ಸಮಿತಿಗೆ, ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯು ನಡೆಯಿತು.
ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಯ್ಯೂಬ್ ಉಳ್ಳಾಲ (ಕರ್ನಾಟಕ), ಉಪಾಧ್ಯಕ್ಷರಾಗಿ ಸಲಾಮ್ ಕುನ್ನಮ್ಮಲ್ (ಕೇರಳ), ಪ್ರಧಾನ ಕಾರ್ಯದರ್ಶಿಯಾಗಿ ಸಯೀದ್ ಕೋಮಾಚಿ (ಕೇರಳ) ಚುನಾಯಿತರಾದರು.
ಕಾರ್ಯದರ್ಶಿಗಳಾಗಿ ಉಸ್ಮಾನ್ ಮೊಹಮ್ಮದ್ (ತಮಿಳ್ನಾಡು) ಮತ್ತು ಒಸಾಮಾ ಅಹಮದ್ (ಕೇರಳ) ಚುನಾಯಿತರಾದರು.
ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಾಕೀರ್ ಪುಂಜಾಲಕಟ್ಟೆ (ಕರ್ನಾಟಕ), ಮೊಹಮ್ಮದ್ ಅಲಿ (ಕೇರಳ), ಬಷೀರ್ ಅಹಮದ್ (ತಮಿಳ್ನಾಡು), ವಸೀಮ್ ಅಕ್ರಮ್ (ಬಿಹಾರ್), ಜಮಾಲ್ ಸರ್ವರ್ (ಝಾರ್ಖಂಡ್), ಟಿ. ವಿ. ರಜಾ಼ಖ್ (ಕೇರಳ), ಮೊಹಿಯುದ್ದೀನ್ (ತಮಿಳುನಾಡು) ಹಾಗೂ ಫೈಜಾ಼ನ್ ಅಹಮದ್ (ಮಹಾರಾಷ್ಟ್ರ) ಚುನಾಯಿತರಾದರು.
ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಅಬ್ಬಾಸ್ ರವರು, ಫೈಸಲ್ ರವರ ಸಹಯೋಗದೊಂದಿಗೆ ನೆರವೇರಿಸಿದರು.
ಅಧ್ಯಕ್ಷರಾಗಿ ಚುನಾಯಿತರಾದ ಅಯ್ಯೂಬ್ ಉಳ್ಳಾಲ ಮಾತನಾಡಿ, ನೂತನ ಪದಾಧಿಕಾರಗಳು ತಮ್ಮ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟು,ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.
2021-2024 ರ ಸಾಲಿಗೆ ಚುನಾಯಿತಗೊಂಡ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ರಾಜ್ಯ ಪದಾಧಿಕಾರಿಗಳು, ಹಾಗೂ ಈಗ ನಿರ್ಗಮಿಸಲಿರುವ ಕೇಂದ್ರ ಸಮಿತಿಯ ಪದಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಸ್ಮಾನ್ ಮೊಹಮ್ಮದ್ ಕಾರ್ಯಕ್ರಮವನ್ನು ನಿರೂಪಿಸಿದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>