ಸಂಪಾಜೆ, ನ.02: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಎಸ್.ಡಿ.ಪಿ.ಐ ಮುಖಂಡ ಹಾಗೂ ಹಿರಿಯರಾದ ಉಸ್ಮಾನ್ ಕೆ ಎಂ ಅರಂತೋಡು ಯವರು ಕನ್ನಡ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿ ಅಧ್ಯಕ್ಷ ಅಶ್ರಫ್ ಟರ್ಲಿ ಮಾತನಾಡಿ ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ, ಪರಂಪರೆಯನ್ನು ಗೌರವಿಸುತ್ತಾ ಅದರ ಉಳಿವಿಗಾಗಿ ಪ್ರಯತ್ನ ಪಡಬೇಕು ಹಾಗೂ ಹಿಂದಿ ಹೇರಿಕೆಯ ಮುಖಾಂತರ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು, ಅದರ ಪರಂಪರೆಗೆ ದಕ್ಕೆ ತರುವ ಪ್ರಯತ್ನವನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ವಿರೋಧಿಸುವ ಮೂಲಕ ಮತ್ತೆ ಹೋರಾಟಗಳನ್ನು ಮಾಡುವ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಮುಖಂಡ ಅಡ್ವೋಕೇಟ್ ರಶೀದ್ ಗೂನಡ್ಕ, ಸಿ ಎಫ್ ಸಿ (ರಿ) ಕಲ್ಲುಗುಂಡಿ ಮಾಧ್ಯಮ ಕಾರ್ಯದರ್ಶಿ ಹಾಷಿಂ ಎಸ್ ಎಚ್ ಶುಭಕೋರಿ ಮಾತನಾಡಿದರು.
ಸಾಮಾಜಿಕ ಮುಖಂಡ ಹಂಸ ಎಸ್ ಎಂ ಕಲ್ಲುಗುಂಡಿ, ಎಸ್ಡಿಪಿಐ ಸಂಪಾಜೆಗ್ರಾಮ ಸಮಿತಿ ಕೋಶಾಧಿಕಾರಿ ಸಲೀಂ ದರ್ಕಾಸ್, ಗ್ರಾಮ ಸಮಿತಿ ಸದಸ್ಯ ಸಿದ್ದಿಕ್ ದೊಡ್ಡಡ್ಕ, ಗೂನಡ್ಕ ಬೂತ್ ಕೋಶಧಿಕಾರಿ ಸಿದ್ದಿಕ್ ಮೂಲೆ, ಕಡೆಪಾಲ ಬೂತ್ ಜೊತೆ ಕಾರ್ಯದರ್ಶಿ ಮರ್ಜೂಕ್ ಕಡೆಪಾಲ, ಎಸ್ ಡಿ ಪಿ ಐ ಅರಂಬೂರು ಬೂತ್ ಕೋಶಧಿಕಾರಿ ರಹೀಮ್ ಕಾಸ್ಪಡಿ
ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಕಾರ್ಯದರ್ಶಿ ಶೇರೀಫ್ ಸೆಟ್ಯಡ್ಕ ಸ್ವಾಗತಿಸಿ, ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಒವೈಸ್ ಸಂಪಾಜೆ ವಂದಿಸಿದರು. ಸುಳ್ಯ ಗ್ರಾಮಾಂತರ ಬ್ಲಾಕ್ ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್ ಕಾರ್ಯಕ್ರಮ ನಿರೂಪಿಸಿದರು.