ಮಹಾರಾಷ್ಟ್ರ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಹಾಗೂ ಎಂ.ಎಫ್.ಸಿ ಫ್ರೂಟ್ಸ್ ಜಂಟಿ ಆಶ್ರಯದಲ್ಲಿ ಗೌಡಾರ್ಸ್ ಬ್ಲಡ್ ಬ್ಯಾಂಕ್ ವಿಜಯಪುರ ಸಹಯೋಗದೊಂದಿಗೆ ಶ್ರೀ.ಸ.ಸ ಮಾಧವಾನಂದ ಪ್ರಭುಜೀರವರ ಜಯಂತ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 02 ನವಂಬರ್ 2021 ನೇ ಮಂಗಳವಾರದಂದು ಮಹಾರಾಷ್ಟದ ಸಾಂಗಲಿ ಜಿಲ್ಲೆಯ ಉಟಗಿಯ ಶ್ರೀ ಗಿರೀಶ ಫಾರ್ಮದಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಒಟ್ಟು 40 ಜನಸ್ನೇಹಿ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು.
ರಕ್ತದಾನ ಮಾಡಿ ಮಾನವೀಯತೆ ಮೆರೆದ ಊರಿನ ಸರ್ವ ಸಹೃದಯೀ ದಾನಿಗಳಿಗೂ, ರಕ್ತನಿಧಿಯ ಸಿಬ್ಬಂದಿ ವರ್ಗಕ್ಕೂ, ಮತ್ತು ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು ತಿಳಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯು ಈ ವರೆಗೆ 186 ರಕ್ತದಾನ ಶಿಬಿರಗಳ ಮೂಲಕ ಒಟ್ಟು 10725 ಯುನಿಟ್ ರಕ್ತ ಸಂಗ್ರಹಿಸಿದ ಹೆಗ್ಗಲಿಕೆಗೆ ಪಾತ್ರವಾಗಿದೆ.