ಕಾರ್ಕಳ: ಕಳೆದ ವಾರ ಹಸೆಮಣೆ ಏರಿದ್ದ 28 ವರ್ಷ ಪ್ರಾಯದ ಯುವಕ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಬೆಳ್ವಾಯಿ ಎಂಬಲ್ಲಿ ನಡೆದಿದೆ.
ಮೃತ ಯವಕನನ್ನು ಕಾರ್ಕಳ ಬೆಳ್ವಾಯಿ ನಿವಾಸಿ ಇಮ್ರಾನ್ ಶೈಕ್(28) ಎಂದು ಗುರುತಿಸಲಾಗಿದೆ.
ಅರಬ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಇಮ್ರಾನ್ ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಅಕ್ಟೋಬರ್ 28ರ ಗುರುವಾರ ಹಸೆಮಣೆ ಏರಿದ್ದ ಮದುಮಗನ ಅಕಾಲಿಕ ಮರಣದಿಂದ ಕುಟುಂಬಸ್ಥರಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ದಾಂಪತ್ಯ ಜೀವನದ ಕನಸು ಕಂಡಿದ್ದ ಮದುಮಗಳು ಹಾಗೂ ಆವಳ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.