ಕಡಬ: ಸಾಮಾಜಿಕ ಹಾಗು ಸಮದಾಯ ಸೇವೆಗಳ ಮೂಲಕ ತಾಲೂಕಿನಾದ್ಯಂತ ಹೆಸರುವಾಸಿಯಾದ ಅನ್ಸಾರುಲ್ ಮುಸ್ಲಿಂ ಯೂತ್ ಪೆಡರೇಶನ್ ಶಾಂತಿನಗರ ಸವಣೂರು ಇದರ ವಾರ್ಷಿಕ ಮಹಾಸಭೆ ಹಾಗು ಮೌಲೀದ್ ಪಾರಾಯಣ ಕಾರ್ಯಕ್ರಮವು ಇಂದು ಶಾಂತಿನಗರದ ಕಛೇರಿ ಮುಂಬಾಗದಲ್ಲಿ ನಡೆಯಿತು.
ಅನ್ಸಾರುಲ್ ಮುಸ್ಲಿಂ ಯೂತ್ ಪೆಡೆರೇಶನ್ ಶಾಂತಿನಗರ ಇದರ ಗೌರವಾಧ್ಯಕ್ಷರಾದ ಸಮದ್ ಸೋಂಪಾಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಮಿತಿಯ ಮಾಜಿ ಗೌರವಧ್ಯಕ್ಷರಾದ ಇಬ್ರಾಹಿಂ ಗಡಿಪ್ಪಿಲ, ಮಾಜಿ ಅಧ್ಯಕ್ಷರಾದ ನಝೀರ್ ಸಿಎ, ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ ಎ, ರಝ್ಝಾಕ್ ಕೆನಾರ, ಚಾಪಳ್ಳ ಮಸೀದಿಯ ಅಧ್ಯಕ್ಷರಾದ ಉಮ್ಮರ್ ಹಾಜಿ ಕೆನರಾ, ಅಲ್‌ನೂರ್ ಮುಸ್ಲಿಂ ಯೂತ್ ಪೆಡರೇಶನ್ ಅಧ್ಯಕ್ಷರಾದ ಝಕರಿಯ ಮಾಂತೂರು, ಅಧ್ಯಕ್ಷರಾದ ಕರೀಂ ನಡುಬೈಲ್ ಉಪಸ್ಥಿತರಿದ್ದರು.
ಸರ್ವ ಸದಸ್ಯರ ಸರ್ವಾನುನತದಂತೆ, ಈ ಹಿಂದಿನ ಸಮಿತಿಯನ್ನೇ ಮುಂದಿನ ವರ್ಷದವರೆಗೆ ಮುಂದೂಡಲಾಯಿತು. ಅಧ್ಯಕ್ಷರಾಗಿ ಮೂರನೇ ಬಾರಿಗೆ ಕರೀಂ ನಡುಬೈಲ್, ಉಪಾಧ್ಯಕ್ಷರಾಗಿ ಮಹಮ್ಮದ್ ಕುಂಞಿ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಜನತಾ, ಜೊತೆ ಕಾರ್ಯದರ್ಶಿಯಾಗಿ ಶಬೀರ್ ಎಂಎಸ್, ಕೋಶಾದಿಕಾರಿಯಾಗಿ ಅಶ್ರಫ್ ಉರ್ಸಾಗ್ ಆಯ್ಕೆಯಾದರು.