dtvkannada

ಪುತ್ತೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ 12 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಸುಳ್ಯ, ಕೊಡಿಪ್ಪಾಡಿ, ಸಾಲ್ಮರ, ಅಂಕತಡ್ಕ,ಬೆಟ್ಟಪಾಡಿ, ಸಂಟ್ಯಾರ್, ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸಂದೇಶ ಮಾತುಗಳನ್ನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಹಾಗೂ ರಾಜ್ಯ ಸಮೀತಿ ಸದಸ್ಯರಾದ ಸಿರಾಜ್ ಮಂಗಳೂರು ಕ್ಯಾಂಪಸ್ ಫ್ರಂಟ್ ಸ್ಥಾಪನೆಗೊಂಡು ಇಂದಿಗೆ 12 ವರ್ಷಗಳು ಪೂರ್ಣಗೊಳ್ಳುತ್ತಿದ್ದು ಈ ಶುಭ ಸಂದರ್ಭವೂ ನಮ್ಮ ಸಂಘಟನೆಯ ಪ್ರಭಾವ ಮತ್ತು ಬೆಳವಣಿಗೆಯ ಕುರಿತು ಅರಿತಾಗ ತುಂಬಾ ಸಂತೋಷವಾಗುತ್ತದೆ ಮತ್ತು ಅದರ ಜೊತೆಗೆ ಮುಂದಿನ ಸವಾಲುಗಳನ್ನು ಎದುರಿಸುವ ಕುರಿತು ಹುಮ್ಮಸ್ಸು ತುಂಬುತ್ತೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಖ್ಯಾತೆ ಪಡೆದ ಭಾರತದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ ಎಂಬ ಆತಂಕಕಾರಿ ಕೂಗುಗಳು, ಧ್ವನಿಗಳು ಮೊಳಗುತ್ತಿರುವುದಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ದೇಶ ಮತ್ತು ರಾಜ್ಯವನ್ನು ಆಳುತ್ತಿರುವ ಸರಕಾರಗಳು ಸಂವಿಧಾನದ ಪ್ರತಿಜ್ಞೆಯೊಂದಿಗೆ ಅಧಿಕಾರ ವಹಿಸಿಕೊಂಡ ಬಳಿಕ ಅದೇ ಸಂವಿಧಾನವನ್ನು ಬುಡಮೇಲುಗೊಳಿಸುವ ಹುನ್ನಾರದಲ್ಲಿ ತೊಡಗಿರುವಾಗ, ಸಂವಿಧಾನವನ್ನು ಉಳಿಸಿದರೆ ಮಾತ್ರ ದೇಶ ಉಳಿಯಬಲ್ಲದು ಎಂಬ ಆಲೋಚನೆಯೊಂದಿಗೆ ಸರಕಾರ ಜಾರಿಗೆ ತರುವ ಜನವಿರೋಧಿ ನೀತಿಗಳನ್ನು, ಸಂವಿಧಾನ ವಿರೋಧಿ ಕಾಯ್ದೆಗಳನ್ನು, ವಿದ್ಯಾರ್ಥಿ ವಿರೋಧಿ ತೀರ್ಮಾನಗಳ ವಿರುದ್ಧ ರಾಜಿ ರಹಿತ ಹೋರಾಟದೊಂದಿಗೆ ಕ್ಯಾಂಪಸ್ ಫ್ರಂಟ್ ಮುಂದೆ ಸಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಅನ್ಸಾರ್ ಬೆಳ್ಳಾರೆ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರು, ಮುಸ್ತಾಫಾ ಕೊಡಿಪ್ಪಾಡಿ ಕಾರ್ಯದರ್ಶಿ, ಫಾರೂಕ್ ಕಬಕ ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!