ಪುತ್ತೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಸಂಟ್ಯಾರ್ ಘಟಕದ ಪದಗ್ರಹಣ ಕಾರ್ಯಕ್ರಮ ಹಾಗೂ ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಮದರಸ ಸಭಾಂಗಣದಲ್ಲಿ ಜರುಗಿತು.
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಂಟ್ಯಾರ್ ಘಟಕದ ಅಧ್ಯಕ್ಷರು ಹಾಗೂ ಜುಮಾ ಮಸೀದಿ ಅಧ್ಯಕ್ಷರು ಆದ ರಝಾಕ್ ಸಂಟ್ಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಸೀದಿ ಖತೀಬರಾದ ಅಶ್ರಫ್ ದಾರಿಮಿ ಉಧ್ಘಾಟನೆಗೈದರು. ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಅಯ್ಯೂಬ್ ಅಗ್ನಾಡಿ ಮಾತನಾಡಿ ದೇಶದಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ, ಸಮಾಜದ ಒಳಿತಿಗಾಗಿ ಇನ್ನೊಬ್ಬರ ಜೀವ ಉಳಿಸುವಂತಹ ಮಹತ್ಕಾರ್ಯಕ್ಕೆ ಇಂದು ಇಂತಹ ರಕ್ತದಾನ ಶಿಬಿರಗಳು ಸ್ಪೂರ್ತಿಯಾಗಲಿ. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಇಂದು ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಂಟ್ಯಾರ್ ಗೌರವಾಧ್ಯಕ್ಷರಾದ ಹಮೀದಾಲಿಸ್ ಸಂಟ್ಯಾರ್, ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಮುಖ್ಯಸ್ಥರಾದ ಪ್ರವೀಣ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು. ಸುಮಾರು 50 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಂಟ್ಯಾರ್ ಹಾಗೂ ಜಮಾತ್ ಕಮಿಟಿ ಕಾರ್ಯದರ್ಶಿಯಾದ ಅಬೂಬಕ್ಕರ್ ಕಲ್ಲರ್ಪೆ, ಉಪಾಧ್ಯಕ್ಷರಾದ ಹಾರಿಸ್ ಸಂಟ್ಯಾರ್, ಕಾರ್ಯದರ್ಶಿಯಾದ ಹಮೀದ್ ಕಲ್ಲರ್ಪೆ , ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಅನ್ಸಾರಿಯಾ ಯಂಗ್ಮೆನ್ಸ್ ಎಸೋಸಿಯೇಷನ್ ಸಂಟ್ಯಾರ್ ಅಧ್ಯಕ್ಷರಾದ ಶಾಫಿ ಸಂಟ್ಯಾರ್, ಪಾಪ್ಯುಲರ್ ಫ್ರಂಟ್ ಸಂಪ್ಯ ಏರಿಯಾ ಅಧ್ಯಕ್ಷರಾದ ಅಶ್ರಫ್ ಎಚ್.ಇ, ಇಂಡಿಯನ್ ಸೋಶಿಯಲ್ ಫಾರಂ ಸಲಾಲ ಏರಿಯಾ ಅಧ್ಯಕ್ಷರಾದ ಸಮೀರ್ ಒಮನ್, ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಮ್ಮದ್ ದುಬೈ ಉಪಸ್ಥಿತರಿದ್ದರು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಂಟ್ಯಾರ್ ಕಾರ್ಯದರ್ಶಿ ರಿಯಾಝ್ ಬಳಕ್ಕ ಸ್ವಾಗತಿಸಿ, ಝಖರಿಯಾ ಸಂಟ್ಯಾರ್ ವಂದಿಸಿದರು.