';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂದು ರಾಜ್ ಕುಟುಂಬದಿಂದ ಗಣ್ಯರಿಗೆ ಮತ್ತು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ.
ಇಂದು 12 ಘಂಟೆಯಿಂದ ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಗು ತ್ರಿಪುರವಾಸಿನಿಯಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಅಪ್ಪು ಆಹಾರ ಪ್ರಿಯರಾಗಿದ್ದರಿಂದ ಅವರ ಅಭಿಮಾನಿಗಳಿಗೆ ವಿವಿಧ ರೀತಿಯ ಭಕ್ಷಗಳನ್ನು ಸಿದ್ಧ ಮಾಡಲಾಗಿದೆ.ಗೀ ರೈಸ್, ಅನ್ನ ಸಾರು, ಅಕ್ಕಿ ಪಾಯಸ, ಮಸಾಲೆ ವಡೆ, ಸೇರಿದಂತೆ ವಿವಿಧ ರೀತಿಯ ಮಾಂಸಾಹಾರವನ್ನುತಯಾರು ಮಾಡಲಾಗಿದೆ.
ಇನ್ನು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನೇಮಿಸಲಾಗಿದೆ.ರಾಜ್ ಕುಟುಂಬದ ಸೂಚನೆಯಂತೆ ಅಭಿಮಾನಿಗಳಿಗೆ ಅಚ್ಚುಕಟ್ಟಾಗಿ, ದೇಸಿ ಶೈಲಿಯಲ್ಲಿ ಸೌದೆ ಒಲೆಯಲ್ಲಿಯೇ ಅಡುಗೆಯನ್ನು ಮಾಡಲಾಗಿದ್ದು, ಬಾಳೆ ಎಲೆಯಲ್ಲಿಯೇ ಊಟ ಬಡಿಸುತ್ತಿದ್ದಾರೆ.