
ಬೀಜಿಂಗ್: 17 ತಿಂಗಳ ನಂತರ ಚೀನಾದ ಬೀಜಿಂಗ್‍ನಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಕಾರಣ ಕಾರ್ಯಕ್ರಮಗಳು ಮತ್ತು ಇನ್ನಿತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಗುರುವಾರ ಒಂದೇ ದಿನ 7 ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಸಂಸ್ಥೆಗಳು ಸಮ್ಮೇಳನಗಳನ್ನು ರದ್ದುಗೊಳಿಸಬೇಕು. ಹೆಚ್ಚು ಜನರು ಒಂದೇ ಕಡೆ ಸೇರದಂತೆ ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
2020ರ ಜೂನ್ ನಂತರ ಕೋವಿಡ್ ಹೊಸ ಅಲೆಯಲ್ಲಿ 45 ಪ್ರಕರಣಗಳು ವರದಿಯಾಗಿವೆ. ನಾಲ್ಕನೇ ಅಲೆ ಹಾಗೂ ಡೆಲ್ಟಾ ರೂಪಾಂತರಿಯಿಂದಾಗಿ ಚೀನಾವು ಕಳೆದ 5 ತಿಂಗಳಿಂದ ಸಮಸ್ಯೆಯನ್ನು ಎದುರಿಸುತ್ತಿದೆ.
ಹೊಸ ಅಲೆಯಿಂದಾಗಿ ಬೀಜಿಂಗ್‍ನಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಬೀಜಿಂಗ್‍ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ದೊಡ್ಡಾಸ್ಪತ್ರೆಗಳು, ಶಾಪಿಂಗ್ ಮಾಲ್‍ಗಳನ್ನು ಬಂದ್ ಮಾಡಲಾಗಿದೆ.