';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಯುವಕನೋರ್ವ ಮೃತಪಟ್ಟ ಘಟನೆ ಅತ್ತಾವರದಲ್ಲಿ ನಿನ್ನೆ ರಾತ್ರಿ ನಡೆದಿದೆ.ಜೆಪ್ಪು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದುರ್ರಹ್ಮಾನ್ ರಿಲ್ವಾನ್(30) ಮೃತಪಟ್ಟವರು.
ಶನಿವಾರ ಅತ್ತಾವರದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ರಾಜಸ್ಥಾನದಿಂದ ಗ್ರಾನೈಟ್ ತುಂಬಿದ ಲಾರಿ ಬಂದಿತ್ತು.ಈ ವೇಳೆ ಕಟ್ಟಡದ ರೈಟರ್ ಆಗಿದ್ದ ರಿಲ್ವಾನ್ ರಲ್ಲಿ ಗ್ರಾನೈಟ್‌ನ ಫೋಟೊ ತೆಗೆಯಲು ಕಟ್ಟಡದ ಸೂಪರ್ ವೈಸರ್ ಸೂಚಿಸಿದ್ದಾರೆನ್ನಲಾಗಿದೆ.ಅದರಂತೆ ಫೋಟೊ ತೆಗೆಯಲು ಅವರು ಲಾರಿಯ ಹಿಂಬದಿಗೆ ತೆರಳಿದ್ದರೆನ್ನಲಾಗಿದೆ.
ಈ ವೇಳೆ ಲಾರಿಯಲ್ಲಿದ್ದ ಗ್ರಾನೈಟ್ ಏಕಾಏಕಿ ರಿಲ್ವಾನ್ರ ಮೈಮೇಲೆ ಬಿದ್ದಿದ್ದು, ಪರಿಣಾಮ ಗಂಭೀರ ಗಾಯಗೊಂಡಿದ್ದರು.ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.